ನೀನ್ ಅರಿ ಕನ್ನಡಿಗ

ಕಿರಣ್ ಮಲೆನಾಡು.

Kannada Arasu ManetanaGalu

ನೀನ್ ಅರಿ ಕನ್ನಡ ನಾಡು ನುಡಿಯ ಎನ್ನ ಕನ್ನಡಿಗ
ನೀನ್ ಅರಿ ಕನ್ನಡ ನುಡಿಯ ಹಳಮೆಯ
ನೀನ್ ಅರಿ ಕನ್ನಡ ನಾಡಿನ ಹಳಮೆಯ
ನೀನ್ ಅರಿ ಕನ್ನಡ ನಾಡಿನ ಉದ್ದಗಲವ
ನೀನ್ ಅರಿ ಕನ್ನಡದ ಗಡಿಯಾಚಿನ ಹಳಮೆಯ
ನೀನ್ ಅರಿ ಕನ್ನಡ ನಾಡು ನುಡಿಯ ಕಟ್ಟಿದವರನ್ನ
ಅರಿತ ಅರಿಮೆಯನ್ನರಗಿಸಿಕೊ ನಿನ್ನ ಹೊತ್ತು ತುತ್ತಿನಂತೆ
ಕದಂಬರಂತೆ ಕನ್ನಡ ನಾಡು ನುಡಿಯನ್ನು ಮರುಕಳಿಸು
ಪಡುವಣ ಗಂಗರಂತೆ ನಾಡು ನುಡಿಯ ಪಹರೆಯ ಮಾಡು
ಬಾದಾಮಿ ಚಾಲುಕ್ಯರಂತೆ  ಬೀಸು ಚಾವಟಿಯ ನಾಡ ವಯ್ರಿಗಳಿಗೆ
ರಾಸ್ಟ್ರಕೂಟರಂತೆ ನಾಡ ನುಡಿಯ ರೊಚ್ಚನೆಬ್ಬಿಸು
ಕಲ್ಯಾಣಿ ಚಾಲುಕ್ಯರಂತೆ  ಕಲ್ಲಿನಲ್ಲಿ ಕೆತ್ತಿಸು ಕನ್ನಡವ
ಹೊಯ್ಸಳರಂತೆ ಹೋರಾಡು ಈ ನಾಡು ನುಡಿಗೆ
ವಿಜಯನಗರದಂತೆ ನಗ-ನಗಿಸು ಈ ನಾಡು ನುಡಿಯ
ಮಯ್ಸೂರ ಅರಸರಂತೆ ಅಪ್ಪಿಕೋ ಈ ನಾಡು ನುಡಿಯ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications