ಕಿರುಗವಿತೆಗಳು

– ನಿತಿನ್ ಗೌಡ.

ಅಹಂಕಾರದ ಮೆಟ್ಟಿಲು

ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು
ಏರಬೇಕು ಮನುಶ್ಯತ್ವದ ಏಣಿ,
ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ
ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು

ನಗು

ನಿನ ನಗುವೇ… ಸಮ್ಮೋಹಕ…
ಹೇಳು ನೀ ಇರುವುದೇನು ಇದಕೆ, ಸರಿಸಾಟಿಯ ರೂಪಕ
ಪದಕಂತೆಯೇ ಬರಿದಾಗಿದೆ, ನಿನ್ನ ಬಣ್ಣಿಸಲು
ಸಾಕಲ್ಲವೆ ಸರಿಹೋಗದೆ? ಈ ಹೊಗಳಿಕೆಯು ತನುವೇ

ಒಲವ ತಂಗಾಳಿ

ಒಲವ ತಂಗಾಳಿ ಬೀಸಲು, ಮಿಂದೆ ನಾ ಅದರಲಿ
ಇರುವುದೇನು, ಇದಕೂ ಮಿಗಿಲಾದ ಅನುಬವದ ಮಜಲು
ಹಿತವಾಗಿದೆ ಈ ಗಳಿಗೆ ,ಬೇಕಿಲ್ಲ ಪೂರ್‍ಣವಿರಾಮ ಇದಕೆ

ಪಲ್ಲಕ್ಕಿ

ನೀಡಬೇಕಿಲ್ಲ ವಿವರಣೆ,
ನೀಡು ನಿನ್ನ ಹಾಜರಿ, ಅಶ್ಟೇ ಸಾಕು
ಏರು‌ ನೀ ನನ್ನೊಲವ ಪಲ್ಲಕ್ಕಿ
ಬಯಸುತಿಹೆ ನಾ,
ಎನ್ನ ಕಿರುಬೆರಳಿಗೆ ಸಾಂಗತ್ಯ

( ಚಿತ್ರಸೆಲೆ: bing.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks