ಮಾಡಿ ನೋಡಿ ರುಚಿ ರುಚಿಯಾದ ಪತ್ರೊಡೆ

ರೇಶ್ಮಾ ಸುದೀರ್.

IMG-20140714-WA0007

ಬೇಕಾಗುವ ಪದಾರ್‍ತಗಳು:
ಅಕ್ಕಿ——————- 1 ಪಾವು
ಉದ್ದಿನಬೇಳೆ———– 2 ಟೀ ಚಮಚ
ಕಡಲೆಬೇಳೆ———— 2ಟೀ ಚಮಚ
ಜೀರಿಗೆ—————– 1/2 ಟೀ ಚಮಚ
ಹುಣಸೆಹಣ್ಣು———– ದೊಡ್ಡ ಲಿಂಬೆಗಾತ್ರ
ಬೆಲ್ಲ—————- 3 ಟೀಚಮಚ(ಪುಡಿಮಾಡಿದ್ದು)
ಒಣಮೆಣಸಿನ ಕಾಯಿ——4-5
ಮರಕೆಸುವಿನ ಎಲೆ——-10-12 (ಆಶಾಡ ಮಾಸದಲ್ಲಿ ಈ ಎಲೆ ಎಳತಾಗಿರುತ್ತದೆ).

ಮಾಡುವ ವಿದಾನ:

ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆಯನ್ನು ನೀರಿನಲ್ಲಿ ತೊಳೆದು 8 ಗಂಟೆಗಳ ಕಾಲ ನೆನಸಿ ಇಡಬೇಕು. ಈ ಮಿಶ್ರಣಕ್ಕೆ ಜೀರಿಗೆ, ಬೆಲ್ಲ, ಮೆಣಸಿನಕಾಯಿ, ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಬೇಕು. ಇಡ್ಲಿ ಹಿಟ್ಟಿನ ಹದ ಇರಬೇಕು. ಉಪ್ಪು ರುಚಿಗೆ ತಕ್ಕಶ್ಟು ಹಾಕಬೇಕು.

ಮರಕೆಸುವಿನ ಎಲೆಯನ್ನು ತೊಳೆದು ಒರೆಸಿಕೊಳ್ಳಬೇಕು. ಎಲೆಯನ್ನು ಮಗುಚಿಕೊಂಡು ಅದಕ್ಕೆ ಹಿಟ್ಟನ್ನು ದಪ್ಪಗೆ ಸವರಬೇಕು, ನಂತರ ಇದರ ಮೇಲೆ ಇನ್ನೊಂದು ಎಲೆ ಇಡಬೇಕು ಅದಕ್ಕೂ ಹಿಟ್ಟು ಸವರ ಬೇಕು. ಇದೇ ತರ 4 ಎಲೆಗಳ ಪದರ ಮಾಡಿಕೊಂಡು ಸುತ್ತಬೇಕು. ಸುತ್ತಿದ ಎಲೆಯನ್ನು ಹಬೆಯಲ್ಲಿ ಬೇಯಿಸಬೇಕು. ಆರಿದ ನಂತರ ಚಾಕುವಿನಲ್ಲಿ ಕಟ್ಲೆಟ್ ರೀತಿ ಕತ್ತರಿಸಿ ತುಪ್ಪ ಹಾಕಿ ಕಾವಲಿಯಲ್ಲಿ ಬೇಯಿಸಿ ಇಲ್ಲವಾದರೆ ಚಿಕ್ಕದಾಗಿ ಕತ್ತರಿಸಿಕೊಂಡು ನೀರುಳ್ಳಿ ಒಗ್ಗರಣೆ ಮಾಡಿದರೆ ಉಪ್ಪಿಟ್ಟಿನಂತೆ ಆಗುತ್ತದೆ. ಮಳೆಗಾಲದಲ್ಲಿ ಪತ್ರೊಡೆ ಆರೊಗ್ಯಕ್ಕೆ ಒಳ್ಳೆಯದು.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: