ಗೆಳತಿಯ ನೆನಪಲ್ಲಿ…

ಕೊಟ್ರೇಶ್ ಟಿ. ಎಂ.

ಆ ನಮ್ಮ ಮೊದಲ ಬೇಟಿ
ಕಾರಣವಾಯಿತು ಈ ಪ್ರೀತಿಗೆ
ಆ ನಿನ್ನ ಮೊದಲ ಮಾತು
ಉಳಿದು ಹೋಯಿತು ಈ ಹ್ರುದಯದಲ್ಲಿ
ಇಂದು ನಿನ್ನ ನೋಡುವಾಸೆ, ಕಾಣದೆ ನೀ ದೂರಾದೆ
ನಾ ಕೊಟ್ಟ ಆ ಮಲ್ಲಿಗೆ ಹೂವು
ಮುಡಿಗೇರಿತು ನಿನ್ನ ಮುಡಿಯ
ನೀ ಕಾಲಿಟ್ಟ ಈ ಹ್ರುದಯದಲ್ಲಿಂದು ನಿನ್ನ ಹೆಜ್ಜೆಯ ಗುರುತು
ಬರೀ ನಿನ್ನ ಹೆಜ್ಜೆಯ ಗುರುತು
ಪ್ರೀತಿಯೆಂಬ ಈ ಸಾಗರದಲ್ಲಿ ನಾವಿಬ್ಬರು
ಒಂದು ಮುತ್ತು ಒಡೆದು ಹೋಯಿತು ಆ ಪ್ರೀತಿಯ
ಮುತ್ತು ತಿಳಿಯದಾದೆ ನಾ ಇಂದು
ಹೆಚ್ಚು ಪ್ರೀತಿಯೆ ಕಾರಣವಾಯಿತೇ ನಮ್ಮಿಬ್ಬರ ಒಡಕಿಗೆ
ತಪ್ಪು ಸರಿಪಡಿಸುವುದೇ ಪ್ರೀತಿಗೆ ನಿಜವಾದ ಅರ‍್ತ
ಮತ್ತೆ ಮತ್ತೆ ನೊಡುವಾಸೆ ನೀ ಯಾಕೆ ಕಾಣದೆ ಹೋದೆ

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. jspradeep says:

    Very nice, write extension with same title. ಗಳತಿಯ ನೆನಪಲ್ಲಿ

ಅನಿಸಿಕೆ ಬರೆಯಿರಿ:

Enable Notifications