ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು

– ಗೀತಾಮಣಿ.

kattada kaarmikaru
ಸದ್ದಿಲ್ಲದೇ
ಸೋರಿ ಹೋಗುತ್ತದೆ
ಸೂರು ಕಟ್ಟಿ ಕೊಡುವ
ಸೂರಿಲ್ಲದವರ ಬದುಕು

ಕನಸಲ್ಲೇ
ಕರಗಿ ಹೋಗುತ್ತದೆ
ಕನ್ನಡಿಯೊಳಗೆ ಕಟ್ಟಿಟ್ಟ ಗಂಟಿನಂತೆ
ಕನಸು ಕಾಣುವ ವಯಸು

ಹರಡಿಕೊಳ್ಳುತ್ತದೆ
ಹಾಸಿಗೆ, ದಿಂಬು,
ಹೊದಿಕೆ, ಆರೈಕೆ, ಹಾರೈಕೆಗಳಿಲ್ಲದೇ
ಹತ್ತರ ಮುಂದೆ ಮತ್ತೊಂದರಂತೆ ಸಾರವಿಲ್ಲದ ಸಂ’ಸಾರ

ನವೆಯುತ್ತದೆ
ನೆಲವಿಲ್ಲದ,ನೆಲೆಯಿಲ್ಲದ,ಅಲೆದಾಡುವ,
ನೋವಿಗೇ ನಲಿವ ಹೆಸರು ಬರೆದುಕೊಂಡು
ನೀರವತೆಯಲ್ಲಿ ನೆರೆಯುತ್ತ ಜೀವಿಸುವ(?) ಜೀವ

ಬಯಲಾಗುತ್ತದೆ
ಬಿದಿರು, ಇಟ್ಟಿಗೆ, ಸಿಮೆಂಟು,ಕಬ್ಬಿಣಗಳ
ಬಂದನದಲ್ಲಿ ಎತ್ತರೆತ್ತರ ಬೆಳೆಯುವ ಕಟ್ಟಡಗಳ ಮದ್ಯದಲ್ಲೇ
ಬವಣೆಯೇ ಬರೆದ, ಗೂಡಿಲ್ಲದವರ ಬಾಳು

(ಚಿತ್ರ ಸೆಲೆ:  thehindubusinessline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: