ಮಾಡಿ ನೋಡಿ ರುಚಿಯಾದ ‘ದಮ್ ಬಿರಿಯಾನಿ’

 ರೇಶ್ಮಾ ಸುದೀರ್.

maxresdefaultಬೇಕಾಗುವ ಸಾಮಾಗ್ರಿಗಳು:

ಕೋಳಿ ಮಾಂಸ——–1/2 ಕೆ.ಜಿ
ಅಕ್ಕಿ—————1/2 ಕೆ.ಜಿ
ಎಣ್ಣೆ—————3 ಟೇಬಲ್ ಚಮಚ
ಲವಂಗ————4
ಚಕ್ಕೆ————–4 ಇಂಚು
ಏಲಕ್ಕಿ————-4
ಈರುಳ್ಳಿ————-4(ನಡು ಗಾತ್ರ)
ಟೊಮಟೊ———- 2
ಶುಂಟಿ, ಬೆಳ್ಳುಳ್ಳಿ ಪೇಸ್ಟ್– 2 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು—–1 ಕಟ್ಟು
ಪುದಿನಸೊಪ್ಪು———1 ಕಟ್ಟು
ಹಸಿರು ಮೆಣಸು——–5
ಮೊಸರು————-2 ಟಿ ಚಮಚ
ನಿಂಬೆಹಣ್ಣು———–1/2 ಬಾಗ
ಕಾರದ ಪುಡಿ———1 ಟಿ ಚಮಚ
ಅರಿಸಿನ————1 ಚಿಟಿಕೆ

ಮಾಡುವ ಬಗೆ:
ಅಗಲವಾದ ದಪ್ಪತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ಎಣ್ಣೆಗೆ ಲವಂಗ, ಚಕ್ಕೆ, ಏಲಕ್ಕಿ, ಹಸಿರುಮೆಣಸಿನ ಕಾಯಿ ಹಾಕಿ ಆಮೇಲೆ ನೀರುಳ್ಳಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಸಲ್ಪ ಬೇಯಿಸಿಕೊಳ್ಳಿ. ಆಮೇಲೆ ಟೊಮೆಟೊ ಹಾಕಿ ಸಲ್ಪ ಉಪ್ಪು ಹಾಕಿ ನಂತರ ಅಚ್ಚಕಾರದ ಪುಡಿ ಹಾಕಬೇಕು, ಅರಿಸಿನ ಹಾಕಿ ನಂತರ ಕೋಳಿ ಮಾಂಸ ಹಾಕಿ ಹಾಗೆಯೇ ಎಣ್ಣೆಯಲ್ಲಿ ಬೇಯಿಸಬೇಕು. ನಂತರ ಮೊಸರು ಹಾಕಿ, 1/2 ಲೋಟ ನೀರು ಹಾಕಿ ಮುಚ್ಚಳ ಹಾಕಿ, ಆಗಾಗ ತಿರುಗಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಮತ್ತು ಪುದಿನವನ್ನು ಅರ‍್ದದಶ್ಟು ಈಗಲೇ ಹಾಕಿ ಇನ್ನುಳಿದುದ್ದನ್ನು ಹಾಗೆಯೇ ಇಟ್ಟಿರಿ. ಕೋಳಿ ಬೆಂದು ಎಣ್ಣೆ ಮೇಲೆ ಬಂದಾಗ ಆ ಎಣ್ಣೆಯನ್ನು ಒಂದು ಸಣ್ಣ ಪಾತ್ರೆಗೆ ಬಗ್ಗಿಸಿ ಇಟ್ಟಿರಿ. ಸಣ್ಣ ಉರಿಯ ಒಲೆಯ ಮೇಲೆ ಒಂದು ಹೆಂಚು ಇಟ್ಟು ಅದರ ಮೇಲೆ ಈ ಕೋಳಿಮಾಂಸದ ಪಾತ್ರೆ ಇಡಿ. ನಿಂಬೆಹಣ್ಣಿನ ರಸವನ್ನು ಮಾಂಸಕ್ಕೆ ಹಾಕಿ ರುಚಿ ನೋಡಿ. ಉಪ್ಪು ಕಾರ ಬೇಕಾದರೆ ಸೇರಿಸಿರಿ.

ಒಲೆಯ ಮೇಲೆ ಇನ್ನೊಂದು ಪಾತ್ರೆಯಲ್ಲಿ ನೀರು ಇಡಬೇಕು. ಆ ನೀರಿಗೆ ಉಪ್ಪು, ಮೊದಲು ತೆಗೆದಿರಿಸಿದ ಪುದಿನ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ಮೊದಲೇ ಅಕ್ಕಿಯನ್ನು ತೊಳೆದು ನೀರು ಸೋಸಿ ಇಟ್ಟಿರಬೇಕು. ಒಲೆಯ ಮೇಲೆ ಇಟ್ಟ ನೀರು ಕುದಿಯುವವರೆಗೂ ಕಾಯಬೇಕು, ಬಳಿಕ ಕುದಿಯುತ್ತಿರುವ ನೀರಿಗೆ ಅಕ್ಕಿಯನ್ನು ಹಾಕಿ. ಅನ್ನ ಪೂರ‍್ತಿಯಾಗಿ ಬೇಯಬಾರದು, ಅರ‍್ದ ಬೆಂದ ಅನ್ನವನ್ನು ಬಸಿದು ಮೊದಲೇ ಬೇಯಿಸಿಟ್ಟುಕೊಂಡ ಕೋಳಿ ಇರುವ ಪಾತ್ರೆಗೆ ಹಾಕಿ. ಕೋಳಿ ಬೆಂದಾಗ ಬಂದ ಎಣ್ಣೆಯನ್ನು ಮೊದಲೇ ತೆಗೆದಿಟ್ಟುಕೊಂಡಿರುತ್ತೇವೆ, ಆ ಎಣ್ಣೆಯನ್ನು ಅನ್ನದ ಮೇಲೆ ಸುತ್ತ ಹಾಕಿ ಮುಚ್ಚಳ ಮುಚ್ಚಿ. ಬಾರವಾದ ವಸ್ತುವನ್ನು ಮುಚ್ಚಳದ ಮೇಲೆ ಇಡಿ. ಸಣ್ಣ ಉರಿಯಲ್ಲಿರುವ ಪಾತ್ರೆಯ ಮುಚ್ಚಳದ ಬದಿಯಿಂದ 5-10 ನಿಮಿಶದ ನಂತರ ಆವಿ ಬರುತ್ತದೆ ಆಗ ಒಲೆಯಿಂದ ಪಾತ್ರೆ ಇಳಿಸಿ. ಬಡಿಸುವಾಗ ಚೆನ್ನಾಗಿ ಕಲಸಿ ಬಡಿಸಿ.

(ಚಿತ್ರ ಸೆಲೆ: youtube.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಇವತ್ತು ದಮ್ ಬಿರಿಯಾನಿ ಮಾಡಿ ನೋಡಿದೆ. ಆದರೆ ಮೂರು ಚಮಚ ಎಣ್ಣೆ ತುಂಬಾ ಕಡಿಮೆ ಎನಿಸಿತು. ದಮ್ ಮಾಡಿ ಇಳಿಸಿದ ಬಳಿಕ ಅಕ್ಕಿ ತುಂಬಾ ಒಣಗಿದಂತಿತ್ತು. ಆದರೆ ರುಚಿ ಮಾತ್ರ ಚೆನ್ನಾಗಿತ್ತು. ಧನ್ಯವಾದಗಳು.-ಅರ್ಶದ್, ದುಬೈ.

  1. 13/10/2016

    […] ಮೊದಮೊದಲಿಗೆ ಕೇವಲ ಕುರಿ, ಕೋಳಿಯನ್ನು ಬಳಸಿ ಬಿರಿಯಾನಿ ಅಡುಗೆ […]

ಅನಿಸಿಕೆ ಬರೆಯಿರಿ: