ತಾಳಿಸಿದ ಕೋಳಿ ಮಸಾಲೆ

ಆಶಾ ರಯ್.

390

ಬೇಕಾಗುವ ಸಾಮಗ್ರಿಗಳು:

ಕೋಳಿ: 1/2 ಕೆ.ಜಿ
ಒಣಮೆಣಸು: 8-10
ಬೆಳ್ಳುಳ್ಳಿ: ಒಂದು ಸಣ್ಣ ಗಡ್ಡೆ
ಮೊಸರು : 2 ದೊಡ್ಡ ಚಮಚ
ಅರಿಶಿನ: 1/2 ಚಮಚ
ಚಕ್ಕೆ: 1 ಚೂರು
ಲವಂಗ: 3-4
ಏಲಕ್ಕಿ: 2
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ

ಮಾಡುವ ಬಗೆ:

1. ಬಿಸಿನೀರಲ್ಲಿ 5 ನಿಮಿಶ ಅದ್ದಿ ಇಟ್ಟ ಒಣಮೆಣಸಿಗೆ ಬೆಳ್ಳುಳ್ಳಿ, ಚಕ್ಕೆ, ಏಲಕ್ಕಿ ಮತ್ತು ಲವಂಗ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
2. ರುಬ್ಬಿದ ಮಸಾಲೆಗೆ ಉಪ್ಪು, ಅರಿಶಿನ ಮತ್ತು ಮೊಸರು ಹಾಕಿ ಕಲಸಿಕೊಳ್ಳಿ.
3. ಕಲಸಿದ ಮಿಶ್ರಣಕ್ಕೆ ಕೋಳಿ ತುಂಡನ್ನು ಹಾಕಿ 1- 2 ಗಂಟೆ ಪ್ರಿಡ್ಜ್ ನಲ್ಲಿಡಿ.
4. ದಪ್ಪ ತಳದ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಕೋಳಿ ತುಂಡುಗಳನ್ನು ಹಾಕಿ, ಉಳಿದ ಮಸಾಲೆಯನ್ನು ಹಾಗೆ ಇಡಿ.
5. ಕೋಳಿ ತುಂಡುಗಳನ್ನು 5-6 ನಿಮಿಶ ತಾಳಿಸಿದ ಮೇಲೆ ಉಳಿದ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ತಾಳಿಸಿ.
7. 3-4 ನಿಮಿಶದಲ್ಲಿ ಕೋಳಿ ಎಲ್ಲ ಮಸಾಲೆಯನ್ನು ಹೀರಿಕೊಳ್ಳುತ್ತದೆ.
8. ತಾಳಿಸಿದ ಕೋಳಿ ಮಸಾಲೆಯನ್ನು ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು ಮತ್ತು ಈರುಳ್ಳಿ ಜೊತೆಗೆ ಬಡಿಸಿರಿ.

ಚಪಾತಿ ಜೊತೆಗೆ ತಿನ್ನಲು ಇದು ರುಚಿಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಕಳೆದವಾರ ನಾವು ಮನೆಯಲ್ಲಿ ಇದನ್ನು ಮಾಡಿದ್ದೆವು. ಚೆನ್ನಾಗಿ ಬಂದಿತ್ತು.

ಅನಿಸಿಕೆ ಬರೆಯಿರಿ:

Enable Notifications OK No thanks