ಇಂತವರು ನಮ್ಮ ಜನ ನಾಯಕರು!

ಜಯತೀರ‍್ತ ನಾಡಗವ್ಡ.

leaders

ಆಗಿಲ್ಲವಂತೆ ಉತ್ತರ ಕರ‍್ನಾಟಕದ ಏಳಿಗೆ
ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ?

ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು
ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ ಸ್ಟೇಟು

ಬಿಡುಗಡೆಗೊಂಡಿತು ದುಡ್ಡು, ಹರಿದು ಬಂದವು ಬಗೆಬಗೆಯ ಪ್ಯಾಕೇಜುಗಳು
ಆದರೂ ಪೂರ‍್ಣಗೊಳ್ಳದೆ ಅರ‍್ದಕ್ಕೆ ನಿಂತಿವೆ ನೀರಾವರಿ ಬ್ಯಾರೇಜುಗಳು

ಕೆಲಸ ಮಾಡದೇ ಇತರರನ್ನು ದೂರುವುದು
ಸದನದಲಿ ಕ್ಯಾಂಡಿ ಕ್ರಶ್ ಆಡುತ್ತ ಕಾಲ ದೂಡುವುದು
ಇದೇ ನಮ್ಮ ಶಾಸಕ,ಸಚಿವರ ಕಾಯಕ
ಇಂತವರು ನಮ್ಮ ಜನ ನಾಯಕರು!

(ಚಿತ್ರ ಸೆಲೆ: blog.helpingadvisors.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *