ರುಚಿಯಾದ ಸೌತೆಕಾಯಿ ತಾಲಿಪೆಟ್ಟು ಮಾಡುವ ಬಗೆ

ಸುನಿತಾ ಹಿರೇಮಟ.Tali

ಬೇಕಾಗುವ ಸಾಮಾಗ್ರಿಗಳು:

ಸೌತೆಕಾಯಿ – 4
ಉಳ್ಳಾಗಡ್ಡಿ – 2
ಬಿಳಿ ಎಳ್ಳು – 4 ಚಮಚ
ಜೀರಿಗೆ- 1 ಚಮಚ
ಅರಿಸಿನದ ಪುಡಿ – 1 ಚಮಚ
ಅಕ್ಕಿ ಹಿಟ್ಟು – 1 ಬಟ್ಟಲು
ಕಡಲೆ ಹಿಟ್ಟು – ಕಾಲು ಬಟ್ಟಲು
ಉಪ್ಪು ರುಚಿಗೆ ತಕ್ಕಶ್ಟು
ಎಣ್ಣೆ – ತಾಲಿಪೆಟ್ಟು ಬೇಯಿಸಲು ಬೇಕಾದಶ್ಟು

ಮಾಡುವ ಬಗೆ:

ಮೊದಲು ಸೌತೆಕಾಯಿಯನ್ನು ಸಣ್ಣಗೆ ತುರಿದುಕೊಳ್ಳಬೇಕು, ಉಳ್ಳಾಗಡ್ಡಿಯನ್ನು ಸಣ್ಣಗೆ ಹೆಚ್ಚಿ ತುರಿದಿಟ್ಟ ಸೌತೆಕಾಯಿಯೊಡನೆ ಬೆರಸಿ, ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಅರೆ ಕ್ಶಣ ಇಟ್ಟರೆ ನೀರು ಬಿಡುತ್ತದೆ. ಬಳಿಕ ಅರಿಸಿನದ ಪುಡಿ, ಎಳ್ಳು, ಜೀರಿಗೆ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಎಲ್ಲವನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಬೇಕು. ಸೌತೆಕಾಯಿ ಅಂದಿನದ್ದೇ ಆಗಿದ್ದರೆ ರಸ ಜಾಸ್ತಿಯಾಗಿರುತ್ತದೆ, ಹಾಗಾದಲ್ಲಿ ಮತ್ತಶ್ಟು ಅಕ್ಕಿ ಹಿಟ್ಟು ಕಲೆಸಿ ಹದ ಸರಿ ಮಾಡಿ.
ಆನಂತರ ಬಾಳೆ ಎಲೆ, ಇಲ್ಲದ್ದಿದ್ದಲ್ಲಿ ದಪ್ಪನೆಯ ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಕಬ್ಬಿಣದ ಹಂಚಿನಲ್ಲಿ ಬೇಯಿಸಿದರೆ ರುಚಿಯಾದ ಸೌತೆಕಾಯಿ ತಾಲಿಪೆಟ್ಟು ರೆಡಿ. ಸಣ್ಣ ಮಕ್ಕಳಿಗೆ ಬೆಣ್ಣೆ ಜೊತೆ, ದೊಡ್ಡವರಿಗೆ ಕೆಂಪು ಕಾರದ ಮೆಂತೆ ಚಟ್ನಿ ಜೊತೆ ತಿನ್ನಲು ಬಹಳ ರುಚಿ ಇರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks