‘ಇದೆಲ್ಲವನ್ನು ಮೀರಿ ‘ಸ್ತ್ರೀ’ ಮತ್ತೇನೋ ಆಗಬೇಕಿದೆ’

– ಪ್ರಿಯದರ‍್ಶಿನಿ ಶೆಟ್ಟರ್.

women

ಮಹಿಳಾ ದಿನ

“ಅಂತರಾಶ್ಟ್ರೀಯ ಮಹಿಳಾ ದಿನ”ದ ಕುರಿತು ಏನಾದರೂ ಬರೆಯಬೇಕೆಂದು ಲೇಕನಿ ಹಿಡಿದೆ. ಏನು ಬರೆಯಲಿ?
ಪೌಶ್ಟಿಕತೆಯ ಬಗ್ಗೆ ಬರೆಯಲು ಯೋಚಿಸುವಾಗ ಕಳೆದ ವಾರ ಅಪೌಶ್ಟಿಕತೆಯ ಕಾರಣದಿಂದ ಅಸುನೀಗಿದ ಎಳೆಮಗುವಿನ ಚಿತ್ರ ಕಣ್ಣ ಮುಂದೆ ಕಟ್ಟಿದಂತಿದೆ;

ಆಕೆಯ ಅಸ್ತಿತ್ವದ ಕುರಿತು ಯೋಚಿಸಲಾರಂಬಿಸಿದರೆ, ಪ್ರತಿದಿನವೂ ದಿನಪತ್ರಿಕೆಯಲ್ಲಿ ಕಾಟ-ಕಿರುಕುಳ, ವರದಕ್ಶಿಣೆಯಂತಹ ಸುದ್ದಿಗಳು. ‘ಆ ದಿಕ್ಕಿನೆಡೆಗೆ ಯೋಚಿಸಿದರೂ ವ್ಯರ‍್ತ’ ಎಂಬ ಸ್ತಿತಿಗೆ ತಂದಿವೆ.
ಸ್ತ್ರೀಯರ ಸಾದನೆ, ಸಮಾನತೆ, ಪ್ರಾಮುಕ್ಯತೆ, ಸಬಲತೆ- ಇವುಗಳನ್ನು ವಸ್ತುವಾಗಿಸೋಣವೆಂದರೆ, ಆತ್ಮಹತ್ಯೆ- ಅತ್ಯಾಚಾರದಂತಹ ಪದಗಳು ನನ್ನ ಬರೆಯುವ ಆಸಕ್ತಿಯನ್ನೇ ಅಡಗಿಸುತ್ತಿವೆ.

ಪ್ರತಿ ವರ‍್ಶವೂ ಈ ದಿನ ಬಂದು ಹೋಗುತ್ತದೆ; ಬರುತ್ತದೆ, ಹೋಗುತ್ತದೆ. ‘ಸ್ತ್ರೀ’ ಚರ‍್ಚೆಯ ವಿಶಯವಾಗಿದ್ದಾಳೆ; ಚರ‍್ಚೆಯ ವಿಶಯವಶ್ಟೇ ಆಗಿದ್ದಾಳೆ.
ಇದನ್ನೆಲ್ಲವನ್ನು ಮೀರಿ ‘ಸ್ತ್ರೀ’ ಮತ್ತೇನೋ ಆಗಬೇಕಿದೆ, ಆಗಲೇಬೇಕಿದೆ….

ಬೇಡಿಕೆ

ಅಸಹಾಯಕ, ಅನಾತಳಾದ ಆಕೆ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾ, ಹಾಗೆಯೇ ಜೀವನಚಕ್ರ ತಿರುವು-ಮುರುವಾದರೆ ಹೇಗೆ ಇದ್ದೀತೆಂದು ಪ್ರಶ್ನಿಸಿಕೊಂಡಳು…
ಮೊದಲು ಸಾವು, ನಂತರ ಅನಾರೋಗ್ಯ, ನಿವ್ರುತ್ತಿ, ಕ್ರಮೇಣವಾಗಿ ಮದ್ಯವಯಸ್ಸು, ಸಂಸಾರ, ಮದುವೆ, ವ್ರುತ್ತಿ,
ಯೌವ್ವನ, ತದನಂತರ ಹದಿಹರೆಯ, ಬಾಲ್ಯ, ಆಟ-ಪಾಟ, ಕೊನೆಗೆ ಹುಟ್ಟು; ಮತ್ತೆ ಮುಂದುವರೆದು ತಾಯಿಯ ಗರ‍್ಬದಲ್ಲಿ ವಂಶವಾಹಿಯಾಗಿ ಬೇಡಿಕೊಂಡಳು: “ಮತ್ತೆ ಹೆಣ್ಣಾಗಿಸಬೇಡ”!!

( ಚಿತ್ರ ಸೆಲೆ:  abbyhopeskinnerart.tumblr.com )

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *