ಕರುನಾಡ ಸೊಗಡು – ಕಿರುಹೊತ್ತಗೆಯ ಮೊದಲನೇ ಕಂತು
– ಹೊನಲು ತಂಡ.
ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರಾದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ ನಡೆ-ನುಡಿಗೆ ಹೆಸರು. ನಮ್ಮ ಸೊಗಡಿನ ನಡೆ-ನುಡಿಯನ್ನು ಸಾರುವ ಹಲವಾರು ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಅಂತಹ ಹಲವು ಬರಹಗಳನ್ನು ಆರಿಸಿ ಕಿರುಹೊತ್ತಗೆ(e-book)ಯ ರೂಪದಲ್ಲಿ ಹೊರತರಲಾಗುತ್ತಿದೆ. ನಮ್ಮ ನಾಡಿನ ಹಲತನವನ್ನು ಈ ಕಿರುಹೊತ್ತಗೆಯಲ್ಲಿ ಸೆರೆ ಹಿಡಿಯಲಾಗಿದ್ದು, ಕಿರುಹೊತ್ತಗೆಯ ಮೊದಲನೆಯ ಕಂತನ್ನು ಓದುಗರ ಮಂದೆ ಇಡುತ್ತಿದ್ದೇವೆ. ಓದಿ, ನಿಮ್ಮ ಗೆಳೆತಿಯರು, ಗೆಳೆಯರು ಹಾಗು ನೆಂಟರೊಂದಿಗೆ ಹಂಚಿಕೊಳ್ಳಿ.
(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)
ಇತ್ತೀಚಿನ ಅನಿಸಿಕೆಗಳು