ಗೋದಿ ಬಣ್ಣ ಸಾದರಣ ಮೈಕಟ್ಟು

– ನವೀನ ಪುಟ್ಟಪ್ಪನವರ.

godibanna

ನಟನೆಯನ್ನು ಮಂಕಾಗಿಸದ
ಅಪೂರ‍್ವ  ಕತೆಯ ರಚನೆ
ಮೂಕ ವಿಸ್ಮಿತರನ್ನಾಗಿಸುವ
ಪಾತ್ರದ ಪರಕಾಯ ನಟನೆ

ತಟ್ಟನೇ ನಕ್ಕು ನಗಿಸುವ
ಸರಳ ಸಂಬಾಶಣೆ
ರಂಗು ರಂಗಿನ ಮನ್ಸು,
ರಕ್ತ ಸಂಬಂದಗಳ ಮರೆತು
ಸ್ವಾರ‍್ತ ಜೀವನ ನಡಿಸೋ ಕನ್ಸು

ಅಂಗ್ಯೆಲಿದ್ದ ಮಾಣಿಕ್ಯ ಮರೆತು
ಕಾಳ ಸಂತೆಯಲಿ ಹುಡಕಲು ಹೊರಟ
ಬಿಕನಾಸಿ ಹುಚ್ಚಕೋಡಿ ವಯಸ್ಸು

ದುಡ್ಡಿನ ಅಮಲಿನಲಿ ಬೆರೆತ ಆವೇಶ
ಕುಡಿದ ಅಮಲಿನ ಪ್ರಪಂಚದ ಸನ್ನಿವೇಶ
ಅರಿವಾದಾಗ ಚಿಕ್ಕ ಚಿಕ್ಕ ನೆನಪಿನ ಬುತ್ತಿ
ಪರಿ ಪರಿಯಾಗಿ ಬಿಚ್ಚಿಟ್ಟ ಸಂದೇಶ

ಹಸಿ ಗೋಡೆಯಲ್ಲಿ ಹರಳಿಟ್ಟ
ಹಾಗೇ ಅಚ್ಚಾದ ಅಚ್ಯುತ್
ಹುಡುಕಾಟದ ಬವಣೆಯಲ್ಲಿ ಜೀವನ
ಕಂಡುಕೊಂಡ ರಕ್ಶಿತ್
ಸರಳ ಸಾದು ಸಜ್ಜನಿಕೆಯ
ನಟನೆ ಮೆರೆದ ಅನಂತ್

ಕೆಸರಿನಲಿ ಕೊಚ್ಚಿ ಹೋಗುತಿದ್ದ
ತಂದೆ ಮಗನ ಬಾವಗಳ ಪಸರಿಸಿದ ಚೌಕಟ್ಟು
ಮೌನದಲ್ಲೂ ಗೆರೆ ಗೆರೆಯಾಗಿ
ಮನ ಮಿಡಿಸುವ ಚಿತ್ರಣದ ಅಚ್ಚುಕಟ್ಟು
ಗೋದಿ ಬಣ್ಣ ಸಾದರಣ ಮೈಕಟ್ಟು

( ಚಿತ್ರಸೆಲೆ: kannada.filmibeat.com )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: