ಸೋಲುತಿಹೆನು ಆದರೂ ಗೆಲುವೇ ನನಗೆ

ಸಿಂದು ಬಾರ‍್ಗವ್.

romantic-silhouette-love-landscape-nature-beautiful-red-sunset-sky-paradise-maldives-indian-ocean-couple-indian-ocean

ಒರಟು ಕಲ್ಲಿನ ಸಂದಿಯಿಂದ ಪ್ರೀತಿಬಳ್ಳಿ ಚಿಗುರಿದೆ
ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ

ಬೆಂಕಿ ಆತ ಕರಗಿದ ಬೆಣ್ಣೆಯಂತೆ
ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ

ಮನಸು ಮಾಯವಾಗಲು ಕಣ್ಣೋಟವೇ ಸಾಕಾಯ್ತು
ಪ್ರೀತಿ ಕುಸುಮ ಅರಳಿ ಸಲುಗೆ ಹೆಚ್ಚಾಯ್ತು

ಸಿಡಿಲಿನ ಮಳೆ ಬಂದರೂ ನೆನೆಯುವ ಆಸೆಯಾಗಿದೆ
ಕಾಡುಮರಗಳಿಂದ ಹೂವುಗಳ ಗಮವು ಹರಡಿದೆ

ಮಾಯಾವಿನಿಯಾಗಿ ನಾನು ನಿನ್ನ ಜೊತೆ ಹೆಜ್ಜೆಹಾಕಬೇಕಿದೆ
ಮುದ್ದು ಮಾಡುತಾ ಸಮಯ ಕಳೆಯಬೇಕಿದೆ

ಸೋಲುತಿಹೆನು ಆದರೂ ಗೆಲುವೇ ನನಗೆ
ನಿನ್ನ ಪಡೆದ ಬಾಗ್ಯ ವರ‍್ಣಿಸಲಿ ಹೇಗೆ?!

(ಚಿತ್ರಸೆಲೆ: wallpapers-kids.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: