ಮನದ ಮಾತು

– ಸುರಬಿ ಲತಾ.

lonelyheart

ಈ ಮನಸು ಹಾಡಿದೆ
ಹೊಸ ಕನಸು ಕಾಡಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

ಕೋಗಿಲೆಯ ಕೊರಳಿದೆ
ಹೂಗಳೆಲ್ಲ ಅರಳಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

ಮರಗಳಲಿ ಮದುವಿದೆ
ಮನದೊಳಗೆ ಮುದವಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

ನದಿಯಲ್ಲಿ ನೀರಿದೆ
ದಡದಲ್ಲಿ ಮರಳಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

ಹೊಸ ಆಸೆ ಅರಳಿದೆ
ಮನಸೇನೊ ಕೇಳಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

ನನ್ನ ದುಕ್ಕ ಮೀರಿದೆ
ಕಂಗಳಲ್ಲಿ ನೀರಿದೆ
ಎಲ್ಲಿ ಹೋದೆ
ನೀನೊಮ್ಮೆ
ಇಲ್ಲಿ ಬಾರದೆ

( ಚಿತ್ರ ಸೆಲೆ: foolishquestions.blogspot.in )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: