ಮೊಟ್ಟೆ ಗೊಜ್ಜನ್ನು ಮಾಡುವ ಬಗೆ

ರೇಶ್ಮಾ ಸುದೀರ್.

img-20160918-wa0005

ಬೇಕಾಗುವ ಪದಾರ‍್ತಗಳು:

ಮೊಟ್ಟೆ —— 4
ಈರುಳ್ಳಿ —— 2
ಟೊಮಟೊ —- 2
ಶುಂಟಿಬೆಳ್ಳುಳ್ಳಿ ಪೇಸ್ಟ್ – 1 ಟಿ ಚಮಚ
ಅಚ್ಚಕಾರದಪುಡಿ —- 1 1/2 ಟಿ ಚಮಚ
ದನಿಯಪುಡಿ ——- 1/2 ಟಿ ಚಮಚ
ಅರಿಸಿನ 1 ಚಿಟಿಕೆ
ಗರಂಮಸಾಲಪುಡಿ —- 1/2 ಟಿಚಮಚ
ಎಣ್ಣೆ ————- 1 ಟೆಬಲ್ ಚಮಚ
ಒಣ ಮೆಂತೆಸೊಪ್ಪು — 1 ಚಿಟಿಕೆ

ಮಾಡುವ ಬಗೆ:

ಮೊದಲು ಮೊಟ್ಟೆಯನ್ನು ಬೇಯಿಸಿ ತೇಗೆದಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ, ನಂತರ ಶುಂಟಿಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಟೊಮಟೊ ಹಾಕಿ ಸಲ್ಪ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ, ಅಚ್ಚಕಾರದಪುಡಿ, ದನಿಯಾಪುಡಿ, ಅರಿಸಿನ ಪುಡಿ ಸೇರಿಸಿ ಚೆನ್ನಾಗಿ ಎಣ್ಣೆ ಮೇಲೆ ಬರುವವರೆಗೆ ಹುರಿಯಿರಿ. ಒಂದು ಲೋಟ ನೀರು ಸೇರಿಸಿ ಚೆನ್ನಾಗಿ ಕುದಿಸಿ ಸಾರು ಗಟ್ಟಿಯಾಗುತ್ತಾ ಬರುವಾಗ, ಬೇಯಿಸಿಟ್ಟುಕೊಂಡ ಮೊಟ್ಟೆಯನ್ನು (ಚಾಕುವಿನಿಂದ ಸಣ್ಣಗೆ ಚುಚ್ಚಿದರೆ ಉಪ್ಪು, ಕಾರ ಒಳಸೇರುತ್ತದೆ) ಹಾಕಿ. ಉಪ್ಪು ಬೇಕಿದ್ದರೆ ರುಚಿ ನೋಡಿ ಹಾಕಿ. ಗರಂಮಸಾಲಪುಡಿ, ಒಣಮೆಂತೆ ಸೊಪ್ಪು ಹಾಕಿ ಒಂದು ಕುದಿ ಕುದಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ. ಅಕ್ಕಿರೊಟ್ಟಿ, ಚಪಾತಿ ಹಾಗು ಪರೋಟ ಜೊತೆ ತಿನ್ನಲು ರುಚಿಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: