ರಕ್ತದಾನ

ಸಿಂದು ಬಾರ‍್ಗವ್.

raktadaana

ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ
ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ

ಉಚಿತವಾಗಿ ಸಿಗುವ ಒಂದು ಸೇಬಿಗಾಗಿ
ಹತ್ತಾರು ಶಹಬ್ಬಾಸ್ ಗಿರಿಗಾಗಿ
ಓಡುತ್ತಿದ್ದೆವು ರಕ್ತದಾನ ಮಾಡಲು
ತಾಮುಂದು ನಾಮುಂದಾಗಿ

ಆಗೆಲ್ಲ ರಕ್ತದಾನದ ಮಹತ್ವ ತಿಳಿದವನೂ ಅಲ್ಲ
ನನಗೂ ಅದರ ಅಗತ್ಯ
ಬರಬಹುದಾದ ಅರಿವೂ ಇರಲಿಲ್ಲ

ಬಿಸಿರಕ್ತ, ಮೋಟಾರು ಬೈಕಿನಲಿ ಕುಳಿತರೂ
ಕುದುರೆ ಮೇಲೆ ಕುಳಿತ ಬಾವ
ಲಗಾಮು ಇಲ್ಲದೇ ಓಡಿಸಿದ್ದಕ್ಕೆ
ನೆಲಕ್ಕುರುಳಿತು ಜೀವ

ಪ್ರಜ್ನೆ ತಪ್ಪಿತು, ಮುಂದೇನಾಯಿತು?
ದಡಬಡ ಎಂದು ತುರ‍್ತು ನಿಗಾ ಗಟಕಕ್ಕೆ ದೇಹ ಹೋಯಿತು

ವೈದ್ಯರು ಬಂದರು, ಸ್ನೇಹಿತರ ಕರೆದರು
ಅಗತ್ಯವಾಗಿ ರಕ್ತ ಬೇಕಾಗಿದೆ
ಆಸ್ಪತ್ರೆಯಲಿ ಸಂಗ್ರಹಿಸಿದ್ದು ಕಾಲಿಯಾಗಿದೆ
ಅಲ್ಲಿ ಇಲ್ಲಿ ವಿಚಾರಿಸಿದರು, ಗೆಳೆಯರು ಗಾಬರಿಗೊಂಡರು
ರಕ್ತದ ಬ್ಯಾಗಿಗಾಗಿ ಉಪಾಯ ಮಾಡಿದರು

ಗೆಳೆಯನ ರಕ್ತವೇ ದೇಹಕ್ಕೆ ಸರಬರಾಜಾಯಿತು
ಕೊನೆಯುಸಿರು ಕೂಡ ಸರಾಗವಾಯಿತು

ಪಿಳಿಪಿಳಿ ಕಣ್ಣಿನಿಂದ ಮತ್ತೆ ಲೋಕ ನೋಡಿದೆ
ಗೆಳೆಯ ನೀಡಿದ ರಕ್ತದಿಂದ ಮತ್ತೆ ಜೀವ ಬಂದಿದೆ
ರಕ್ತದಾನದ ನಿಜವಾದ ಅರ‍್ತ ಈಗ ಅರಿವಾಗಿದೆ

(ಚಿತ್ರ ಸೆಲೆ:  nationwidechildrens.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: