ನನಗಿಹುದು ಸದಾ ನಿನ್ನ ನಿರೀಕ್ಶೆ

– ಸುರಬಿ ಲತಾ.


ವರುಶಗಳಿಂದ ಬಿಡದೇ ಬೇಡುತಿಹೆ
ಕರುಣೆ ಬಾರದೇ ದೇವ
ಆಲಿಸದೆ ಕೂತೆಯ ನೀನು
ಮೂಕಿಯಂತಾದೆ ನಾನು

ಅಳಿಯದಾಯಿತೇ ಮಾಡಿದ ಪಾಪ
ಕರಗುವುದೆಂದೋ ನಿನ್ನ ಕೋಪ
ಮಾಡುತ ಕುಳಿತೆ ಸಹನೆಯ ಪರೀಕ್ಶೆ
ನನಗಿಹುದು ಸದಾ ನಿನ್ನ ನಿರೀಕ್ಶೆ

ಆಸ್ತಿ ಅಂತಸ್ತುಗಳನು ಬೇಡೆನು
ಅಂತರಂಗದ ನೋವ ತಾಳೆನು
ಎಲ್ಲಾ ಅರಿತವನು ನೀನು
ನಿನಗೆ ಬೇಡವಾದೆನಾ ನಾನು

ಕಲಿಯುಗವಾದರೇನು
ಕಲ್ಲಾಗಬೇಕೇನು
ನಂಬಿಕೆಯನು ಉಳಿಸು
ಬಂದು ನನ್ನ ಸಂತೈಸು

( ಚಿತ್ರ ಸೆಲೆ: blog.onlineprasad.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: