ಬೆಳಗಿನ ತಿಂಡಿಗೆ ಮಾಡಿನೋಡಿ ಮಂಡಕ್ಕಿ ಚಿತ್ರಾನ್ನ
ಮಂಡಕ್ಕಿ – 2 ದೊಡ್ಡ ಲೋಟ (2 ಪಾವಿನಶ್ಟು)
ಈರುಳ್ಳಿ – 2
ಟೊಮೊಟೊ – 1 (ದೊಡ್ಡ ಗಾತ್ರದ್ದು)
ಹಸಿಮೆಣಸು – 4-5
ಜೀರಿಗೆ – 1/4 ಚಮಚ
ಶೇಂಗಾಬೀಜ – 3 ಚಮಚ
ಸಾಸಿವೆ – 1/4 ಚಮಚ
ಲಿಂಬೆಹಣ್ಣು – 1/2
ಕರಿಬೇವು – 8-10 ಎಸಳು
ಮಾಡುವ ಬಗೆ:
ಒಂದು ಬಾಣಲೆಗೆ 3-4 ಚಮಚದಶ್ಟು ಎಣ್ಣೆಹಾಕಿ ಅದು ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಶೇಂಗಾಬೀಜ, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಬಳಿಕ ಅದಕ್ಕೆ ಟೊಮೊಟೊ, ಚಿಟಕಿ ಅರಿಶಿನ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬಾಡಿಸಿಕೊಳ್ಳಬೇಕು, ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮಂಡಕ್ಕಿಯನ್ನು ಅದ್ದಿ ತಕ್ಶಣ ತೆಗೆದು ಒಗ್ಗರಣೆಗೆ ಹಾಕಿ, ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ಕಲಸಿದರೆ ಮಂಡಕ್ಕಿ ಚಿತ್ರಾನ್ನ ಸವಿಯಲು ಸಿದ್ದ.
(ಚಿತ್ರ ಸೆಲೆ: quora.com)
ಇತ್ತೀಚಿನ ಅನಿಸಿಕೆಗಳು