ಮನದನ್ನೆಯ ಕೋಪ
– ಬಾವನ ಪ್ರಿಯ.
ಅದೇಕೋ ಅಂದು ಆಕೆಗೆ ಇನಿಯನ ಮೇಲೆ ಕೆಂಡದಂತಹ ಕೋಪ.
‘ಇವತ್ತು ಒಂದು ತೀರ‍್ಮಾನ ಮಾಡಿಬಿಡಬೇಕು’ ಎಂದುಕೊಳ್ಳುತ್ತಲೇ ಮನೆಕೆಲಸದಲ್ಲಿ ತೊಡಗಿಕೊಂಡಳು.
ಅವನಿಗೂ ತಿಳಿದಿತ್ತು ಹೆಂಡತಿಯ ಕೋಪ. ಸದ್ದು ಮಾಡದೆ, ಮನೆಯೊಳಗೆ ಸೇರಿಕೊಂಡ.
ಮೆಲ್ಲನೆ ಹೆಜ್ಜೆ ಹಾಕುತ್ತಾ ಅಡುಗೆಮನೆಯಲ್ಲಿದ್ದ ಹೆಂಡತಿಯ ಹಿಂದೆ ಬಂದು ನಿಂತ.
ಕೆಲಸ ಮುಗಿಸಿ ತಿರುಗಿದ ಅವಳು ಬೆಚ್ಚಿಬಿದ್ದಳು.
ಮೊದಲೇ ಕೋಪದಲ್ಲಿದ್ದ ಆಕೆಗೆ ರೇಗಿ ಹೋಯ್ತು. ಗಂಡನನ್ನು ತರಾಟೆಗೆ ತೆಗೆದುಕೊಂಡಳು.
ಕೋಪದ ಬರದಲ್ಲಿ ‘ಈ ಮನೇಲಿ ನಿಮ್ದು ಅಂತ ಏನಿದೆ ಅದೆಲ್ಲ ತಗೊಂಡು ಮನೆಯಿಂದ ಆಚೆ ನಡೀರಿ’ ಎಂದು ಬಿಟ್ಟಳು!
ಕೋಪದಿಂದ ಕೆಂಪಾದ ಅವಳ ಮುಕವನ್ನೆ ನೋಡುತ್ತಿದ್ದ ಅವನು, ಮನದರಸಿಯನು ಬರಸೆಳೆದನು.
ಮಗುವಿನಂತೆ ತೋಳ ತೆಕ್ಕೆಯಲ್ಲಿ ಎತ್ತುಕೊಂಡು ಮನೆಯಿಂದ ಹೊರ ನೆಡೆದನು.
ಹೊರಗೆ, ನಲ್ಲೆಯ ಹಣೆಗೊಂದು ಹೂ ಮುತ್ತನಿಟ್ಟು, ‘ಇದು ನಂದೆ’ ಎಂದ ಅವಳ ಕಿವಿಯಲ್ಲಿ.
ಅವಳ ಕಣ್ಣುಗಳನ್ನೇ ದಿಟ್ಟಿಸಿದ. ಅವಳ ಕಂಬನಿ ಕೆನ್ನೆಗೆ ಜಾರಿತ್ತು.
ಬಾವನೆಗಳು ತುಂಬಿ ಬಂದು ಅವಳ ಹ್ರುದಯ ನಲ್ಲನ ತೋಳಿನಾಸರೆ ಬಯಸಿತ್ತು 🙂
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು