ನಾ ಬರೆಯ ಹೊರಟೆ…

– ಸುರಬಿ ಲತಾ.

ಬರೆಯ ಹೊರಟೆ ನನ್ನ
ಬಾವನೆಗಳು ಪದಗಳ
ರೂಪದಲ್ಲಿ

ನಾನು ಕವಿಯೋ, ಸಾಹಿತಿಯೋ
ನಾ ಅರಿಯೆ
ಬೇಕಿಲ್ಲ ಹೆಸರುಗಳ ಗೊಡವೆ

ಬರೆಯುತಾ ಹೋಗುವೆನು ನಾ
ನನ್ನ ಮನದಾಳದ ಇಂಗಿತವನ್ನ
ಅದರಲ್ಲಿಯೇ ತ್ರುಪ್ತಿ ಕಾಣುವೆ ನಾ

ಬೇಸತ್ತು ಕೈಗಳು ಸೋಲುವುದೆಂದೋ
ಮನಸೋತು ಅಳುವುದೆಂದೋ
ಇಂಗಿದಾಗ ಬರಹದ ಬೆಳವಣಿಗೆ
ಸಾಗಲಿ ಮರಣದ ಮೆರವಣಿಗೆ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *