ಮಾಡು ನೀ ಆತ್ಮಸಾದನೆ

– ಸುರಬಿ ಲತಾ.

ಜಾತಿ ಜಾತಿ ಎನ್ನುವರೇಕೆ
ಮೂಡ ಜನಗಳು
ಜನಾರ‍್ದನನ ಬಯವಿಲ್ಲದ
ನಾಸ್ತಿಕರು

ಉಸಿರಾಡಲು ಬೇಕು ಗಾಳಿ
ಅದರಲ್ಲಿಯೂ ಕಾಣುವರೇ ಜಾತಿಯ?
ಉತ್ತಮವಲ್ಲವದು ಇವರ ರೀತಿಯು
ಹೇಳುವರು ಯಾರು ಇವರಿಗೆ ನೀತಿಯ?

ಕೂಡಿಟ್ಟ ಹಣವಿಹುದು ಸಹಜ
ಕೊನೆಗಾಲದಲ್ಲಿ ಬರದು ಮನುಜ
ಮಾಡಿದ ಪಾಪ ಕಾಡುವುದು ಒಂದು ದಿನ
ಪುಣ್ಯ ಒಂದೇ ಸಲಹುವುದು ನಿನ್ನ

ದಾನ, ದರ‍್ಮ ಮಾಡದವನು
ಮೇಲು, ಕೀಳೆಂದು ಬಾವಿಸುವವನು
ಕಡೆಗೊಂದು ದಿನ ಕಂಡಾನು
ಬೂಲೋಕದಲ್ಲೇ ನರಕವನ್ನು

ಬದಲಿಸಿಕೋ ಕೊಳಕು ಯೋಚನೆ
ಮಾಡು ನೀ ಆತ್ಮಸಾದನೆ
ಅನ್ಯರಲ್ಲಿ ತೋರು ಕರುಣೆ
ನಿನಗೆ ಸಿಗುವುದು ಮನ್ನಣೆ

(ಚಿತ್ರ ಸೆಲೆ: shilrani.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: