ನೀ ಬಣ್ಣಗಳ ಕುಂಚಗಾರ…

– ವಿನು ರವಿ.

ನೀ ಬಣ್ಣಗಳ ಕುಂಚಗಾರ
ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ
ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ
ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ

ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ
ಅರಳೋ ಹೂವಿಗೆ, ಕುಣಿಯೋ ನವಿಲಿಗೆ
ಹಳದಿಯಂತೆ ಕೆಂಪಂತೆ
ನೀಲಿಯಂತೆ, ಕುಂಕುಮ ರಾಗವಂತೆ
ತರತರ ಬಣ್ಣಗಳ ಹರಡಿಬಿಟ್ಟೆ

ತಾರೆ ಚಂದ್ರಮಗೆ ಬೆಳ್ಳಿರಂಗು ಬಳಿದುಬಿಟ್ಟೆ
ಹೊನ್ನಿನ ರಂಗನು ದಿನಕರನಿಗಿಟ್ಟೆ
ಓ ಮೋಡಿಗಾರ,
ನೀ ಬಿಡಿಸಿದ ಬಣ್ಣಗಳ ಚಿತ್ತಾರಕೆ
ಮೋಹಕ ರಮ್ಯ ವಿಲಾಸಕೆ
ರಸಿಕ ಮನ ಮರುಳಾಗಿಬಿಟ್ಟಿದೆ

ಕಲೆಯ ಬಲೆಯ ವರ‍್ಣಶಿಲ್ಪಿಗೆ
ಮನ ಒಲಿದುಬಿಟ್ಟಿದೆ
ನಿನ್ನನೇ ದ್ಯಾನಿಸಿದೆ
ಓ ಬಂದುವೇ…
ನಿನ್ನನೇ ಆರಾದಿಸಿದೆ

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: