ಮರಳಿ ಬರಬಾರದೇ ಆ ದಿನಗಳು

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ).

ಬಾಲ್ಯದ ಜೀವನ
ಮರಳಿ ಬರಬಾರದೇ
ನಾವಾಡಿದ ತುಂಟ ಆಟಗಳು
ಈಗಲೂ ಸಿಗಬಹುದೇ

ಮರಳಲಿ ಮನೆ ಮಾಡಿ
ಸ್ನೇಹಿತರ ಜೊತೆಯಲಿ
ಸಂಸಾರದ ಆಟವಾಡಿದ
ಆ ದಿನಗಳು

ಎಮ್ಮೆಯ ಮೇಲೆ ಕುಳಿತು
ಸವಾರಿ ಮಾಡಿ
ಅಂಬಾರಿಯ ನೋಡುತಿದ್ದ
ಆ ದಿನಗಳು

ಮಾವಿನ ತೋಪಲಿ ಕದ್ದು ಹಣ್ಣು ಬಿಡಿಸುತ
ಒಡೆಯನ ಕೂಗಾಟದ
ಸದ್ದು ಕೇಳಿ ಬೇಲಿ ಹಾರಿದ
ಆ ದಿನಗಳು

ಒಂದು ಕಾಲಲಿ ಕುಂಟುತ
ನಟನೆಯಲ್ಲಿ ಕೆಳಗೆ ಕುಸಿಯುತ
ಸ್ನೇಹಿತರ ಹಿಡಿಯುತಿದ್ದ
ಆ ದಿನಗಳು

ಚಿಟ್ಟೆಯ ಬಾಲಕೆ
ದಾರವ ಕಟ್ಟಿ
ಚಿಟ್ಟೆಯ ಹಾರಿಸುತ್ತಿದ್ದ
ಆ ದಿನಗಳು

ಅಕ್ಕ-ಪಕ್ಕದ ಮನೆಯ
ಗೆಳೆಯರ ಸಂಗ
ಕೂಡಿ ಆಡಿ, ತಿಂದ
ಆ ದಿನಗಳು

ಬೆಳದಿಂಗಳಲಿ ಅಮ್ಮನ ಕೈ ತುತ್ತು
ಚಂದ್ರನ ನೋಡುತ ಅಪ್ಪನ ಅಪ್ಪುಗೆಯ
ಸಿಹಿ ಮುತ್ತು.

ಆ ದಿನಗಳು ಮರಳಿ ಬರಬಾರದೇ, ಮತ್ತೆ ಸಿಗಬಾರದೇ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: