ಬಾಳ ದಾರಿಯ ಪಯಣ

– ವಿನು ರವಿ.

ಬಾಳಿನ ದಾರಿಯಲಿ
ನಡೆಯುತಿರಬೇಕು
ನಿಲ್ಲದ ಹಾಗೆ
ನಿರಂತರ ನಡಿಗೆ…
ಏಳುಬೀಳುಗಳು
ತಡೆಗೋಡೆಗಳು
ಒಲವಿನ ಜೊತೆಗೆ
ವಿರಹದ ನೋವು.
ಗೆಲುವಿನ ಜೊತೆಗೆ
ಸೋಲಿನ ಬಾವು.
ಎಲ್ಲವ ದಾಟಿ
ನಡೆಯುತಿರಬೇಕು…

ದಾರಿ ಹೊಸತೆ!?
ಅಲ್ಲವೇ ಅಲ್ಲ
ನಡೆದಿವೆ ತರತರ
ಹೆಜ್ಜೆಗಳು
ಉಳಿಸಿವೆ ಅದರದೇ
ಗುರುತುಗಳು…
ಒಳಗಿನ ಅರಿವು
ಹೊರಗಿನ ತಿಳಿವು
ದಾರಿಗೊಂದು ಹೊಸತನ
ಚೆಲುವಿನ ಬೆರಗಿನ
ನೋಟಗಳ
ಬಾಳಲಿ ತುಂಬಿಕೊಳುತ
ನಡೆಯುತಿರಬೇಕು…

ದಾರಿ ಕಟ್ಟಿಕೊಟ್ಟ
ನೆನಪುಗಳಾ ಬುತ್ತಿ
ಸಾದನೆಯೋ ವೇದನೆಯೋ
ಸಿಗುವುದೆಲ್ಲವ ಸಿಕ್ಕಂತೆಯೇ
ಅರಿತುದೆಲ್ಲವ ಅರಿತಂತೆಯೇ
ಹೊತ್ತು ನಡೆಯುತಿರಬೇಕು…

(ಚಿತ್ರ ಸೆಲೆ: pixabay)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: