ದರ‍್ಪಣದೆದಿರು ನನ್ನಾಕೆ…

– ಸಂದೀಪ ಔದಿ.

ದರ‍್ಪಣದೆದಿರು ನನ್ನಾಕೆ
ಬಣ್ಣಿಸಲಾಗದ ಅವಳ ನಾಚಿಕೆ
ಗುನುಗುತ್ತಿದ್ದಳು ಯಾವುದೋ ಹಾಡು

ನೋಡುವಂತಿತ್ತು ಈ ಹ್ರುದಯದ ಪಾಡು
ಸ್ತಿರ ಚಿತ್ರದಂತೆ ಆ ಪ್ರತಿಬಿಂಬ
ಸೊಂಟ ಸುತ್ತಿದ ತುಸು ಜಂಬ

ಕೈಗೆ ಮುತ್ತಿಡುತಿದ್ದ ಗಾಜಿನ ಬಳೆಗಳು
ದ್ರುಶ್ಟಿ ಬೊಟ್ಟಿನಂತಿದ್ದ ಮಚ್ಚೆ ಕಲೆಗಳು
ತುಂಬಾ ಹೊತ್ತು ನಡೆದಿತ್ತು ಆ ಸಂವಾದ

ಕೇಳಲು ಹಿತವಾಗಿತ್ತು ಮೌನ ನಿನಾದ
ಕದ್ದು ನೋಡುತ್ತಿದ್ದೆ ಆಗಾಗ ಆ ಕಚೇರಿ
ಕಣ್ಣಾಲಿ ಒದ್ದೆ ಮಾಡಿದೆ ಹಳೆ ನೆನಪಿನ ಸವಾರಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: