ಮರಳಿ ಬರುವೆಯಾ ಗೆಳತಿ…

ಸಂಜಯ್ ದೇವಾಂಗ.

ನೀ ಮೌನದಿ ಮನವ ಕದ್ದೆ
ಅದೇ ತಾವಿನಲ್ಲಿ ಕಾದಿರುವೆ
ಮುದ್ದು ಮುಕವ ಕಾಣುವ ತವಕದಿ

ತಿರುಗಿ ಹೋಗುವ
ದಾರಿಯನೇ ಮರೆತಿರುವೆ

ಉಳಿದಿರುವುದೊಂದೆ
ಉಳಿದ ದಿನಗಳು ನಿನ್ನೊಂದಿಗೆ
ಹೆಜ್ಜೆ ಹಾಕುವುದೊಂದೆ
ಮರಳಿ ಬರುವೆಯಾ ಗೆಳತಿ…

 ****************************************

ಮನಸೆಂಬ ದೋಣಿ
ಎತ್ತ ಸಾಗುತಿದೆ ನಾ ಅರಿಯೆನು

ಎಲ್ಲವನು ಮರೆತಿರುವ
ನಿನಗೇನು ತಿಳಿಯುವುದು
ಕೆಟ್ಟು ನಿಂತಿರುವ
ದೋಣಿಯಂತೆ ಆಗಿರುವೆ

ಒಮ್ಮೆ ತಿರುಗಿ ನೋಡು ಸಾಕು
ಮತ್ತೆ ನಾವಿಬ್ಬರು
ಆ ದೋಣಿಯ ಪಯಣಿಗರಾಗೋಣ

(ಚಿತ್ರ ಸೆಲೆ:  kenmareselfcatering.wordpress.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.