ಜೀವನ ‘ಗಜಾನನ’

– ಪ್ರವೀಣ್ ದೇಶಪಾಂಡೆ.

ಹೊತ್ತು ತಂದು
ಸುತ್ತ ಬಾಜಾ ಬಜಂತ್ರಿ
ಉಗೇ ಉಗೇ ಬಕುತಿ

ಇರುವಶ್ಟು ದಿನ
ಪೂಜೆ ಪುನಸ್ಕಾರ
ಸುಡುವ ಪಟಾಕಿ

ಹೊಂಟರೆ?
ಗಂಟೆ
ಡಾಣಿ, ಮಂಡಕ್ಕಿ

ಮುಗಿಯಿತು
ತಂದಿಕ್ಕಿದವರೆ
ಮತ್ತೆ

ಹೊತ್ತೊಯ್ದು
ಮುಳುಗಿಸುವರು
ತರುವಾಗಿನಶ್ಟೆ

ಪ್ರತಿಶ್ಟೆ
ಜೀವಿತವು ಇಶ್ಟೇ
ಇದು

“ಗಜಾನನನ ಜಾಗ”
ಮತ್ತೂ ಅದೆ
ಉಲ್ಟಾ ಓದಿದಾಗ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: