ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ.

ಸತ್ಯದ ಹೊಳಹಲ್ಲಿ
ಸಾವಿನ ತೇರು
ಆಸೆಯ ನಕ್ಶತ್ರಗಳೆಲ್ಲಾ
ಮೆರವಣಿಗೆ ಹೊರಟಿವೆ

ಬಾವದ ಬಿಂದಿಯಿಟ್ಟ
ಚೆಲುವೆಯರೆಲ್ಲಾ ನಗಲು
ಲೋಕ ಸುಂದರ ಸ್ವಪ್ನಗಳಲಿ
ತೇಲಾಡಿತು

ರತದ ಬೀದಿಯಲ್ಲಿ
ಚರಿತ್ರೆ ಬರೆದವರಿಗೆ ಮಾತ್ರ
ನೆಲಹಾಸು
ಮಿಕ್ಕವರಿಗೆ ಸಂಬ್ರಮದ
ಮೇಲುಹೊದಿಕೆ

ಸತ್ಯ ಹುಡುಕುತ್ತಾ ನಿಂತವರು
ಜಗದ ನಗ್ನತೆಗೆ ಬೆಚ್ಚಿ
ಕಾಡಿನಲ್ಲೇ ದ್ಯಾನದಲ್ಲಿ
ಲೀನವಾದರು

( ಚಿತ್ರ ಸೆಲೆ:  mindfulmuscle.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bkrs setty says:

    ಸುಂದರ

bkrs setty ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *