ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.

 

ಮಡಿಯುವ ಮುನ್ನ
ಒಂದು ಆಸೆ ಚಿನ್ನ
ಎದೆಗೆ ತಲೆಯಾನಿಸಿ
ತಬ್ಬಿಬಿಡಬೇಕು ನಿನ್ನ

ನೂರು ನೋವ ತಣಿಸಿ
ಹರುಶದಿ ಮನವ ಕುಣಿಸಿ
ಕಣ್ಣ ನೀರ ಸುರಿಸಿ
ಸಂತೈಸಿಬಿಡು ನೀ ನನ್ನ

ಒಲವು ಒಲ್ಲದ ಜನ
ಅರಿಯಲಾರರು ಮನ
ನೀನಾದೆ ಜೀವನ
ಮುರಿಯಲಾರರು ಬಂದನ

ಸೋಲುವ ಮುನ್ನ ನಾವು
ಪ್ರೀತಿಯಲಿ ಕಂಡೆವು ಗೆಲುವು
ಸಣ್ಣ ಆಸೆಯೊಂದು ಉಳಿದಿದೆ
ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

( ಚಿತ್ರ ಸೆಲೆ: foolishquestions.blogspot.in )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: