ಸಾವಿರದ ಮೌಲ್ಯಗಳು…

– ಸವಿತಾ.

ನೆನಪಿನಾ ನೋವು
ಕನಸಿನಾ ಕಡಲು
ಬವ್ಯತೆಯ ನಡುವೆಯೂ
ಕಂಡ ಸೋಲು
ಕಳೆದು ಹೋದ
ಸಂಬ್ರಮದ ಸಂಗತಿಗಳು
ಸಿಹಿ ನೆನಪಾಗಿ
ಮನದಲಿ ಸ್ತಿರ
ಆಗಿಹವು.

ಅಮೂಲ್ಯ ಸಮಯವ
ಅಂತಕರಣದ ಪ್ರೀತಿಯಲಿ
ಹಂಚಿದ ನೆನಪು
ಮಾತ್ರ ಎದೆಯಲಿ
ಉಳಿದಿಹವು.

ಕಾಲ ಚಕ್ರದಲಿ
ಸಿಲುಕಿ
ಮಾನವೀಯತೆ
ಮೆರೆದವರು
ಹೋದರೂ
ಜೀವಂತ ಅವರ
ಮೌಲ್ಯಗಳು.

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications