ಮಾಡಿನೋಡಿ ರುಚಿಯಾದ ಚಟ್ನಿ

– ಕಲ್ಪನಾ ಹೆಗಡೆ.

ರುಚಿಯಾದ ಚಟ್ನಿ ಮಾಡುವ ಬಗೆ ತಿಳ್ಕೋಬೇಕಾ? ಹಾಗಿದ್ದಲ್ಲಿ ಇಲ್ಲಿದೆ ಅದನ್ನು ಮಾಡುವ ಬಗೆ.

ಬೇಕಾಗುವ ಪದಾರ‍್ತಗಳು:

1. 2 ಚಮಚ ಉದ್ದಿನಬೇಳೆ, 2 ಚಮಚ ಕಡ್ಲೆಬೇಳೆ, 2 ಚಮಚ ಹುರಕಡ್ಲೆ
2. ಇಂಗು
3. 4 ಹಸಿಮೆಣಸಿನಕಾಯಿ, 2 ಒಣಮೆಣಸಿನಕಾಯಿ
4. ಕರಿಬೇವು
5. ಕುತ್ತೂಂಬರಿ ಸೊಪ್ಪು
6. 1 ಟೊಮೇಟೊ
7. 1 ಈರುಳ್ಳಿ
8. ಕಾಲು ಚಮಚ ಬೆಲ್ಲ
9. ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:

ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ, ಕಡ್ಲೆಬೇಳೆ, ಹುರಿಗಡ್ಲೆ, ಇಂಗು, ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಹುರಿದು ಮಿಕ್ಸಿಗೆ ಹಾಕಿಕೊಳ್ಳಿ. ಆನಂತರ ಟೊಮೇಟೊ, ಈರುಳ್ಳಿ ಹುರಿದು ಮಿಕ್ಸಿಗೆ ಹಾಕಿ. ಆಮೇಲೆ ಕಾಯಿತುರಿ, ಕಾಲು ಚಮಚ ಬೆಲ್ಲ, ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿ ರುಬ್ಬಿಕೊಳ್ಳಿ. ಆಮೇಲೆ ಎಣ್ಣೆ, ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನೀವು ತಯಾರಿಸಿದ ಚಟ್ನಿಯನ್ನು ದೋಸೆ, ಚಪಾತಿ, ಅನ್ನದೊಂದಿಗೆ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks