ಸಾಗುತಿರು ನೀ ಮುಂದೆ

– ಈಶ್ವರ ಹಡಪದ.

ಸಾಗುತಿರು ನೀ ಮುಂದೆ
ನಿನಗೇತಕೆ ಗೆಲುವು ಸೋಲಿನ ದಂದೆ
ನೀನೊಂದು ಹರಿಯುವ ನದಿಯು
ಆಣೆಕಟ್ಟಿಗಿರಲಿ ನಿನ್ನ ಬಯವು
ಮುಂದೆ ಸಾಗುವದೊಂದೇ ತಿಳಿದಿದೆ ನಿನಗೆಂದೂ
ಸಾಗರದಂತ ಅದ್ಬುತ ಗುರಿ ತಲುಪುವವರೆಗೂ
ಸಾಗುತಿರು… ನೀ ಸಾಗುತಿರು…

ಕಿರಿದಾದ ದಾರಿಯಾದರೇನು
ಹಿರಿದಾದ ಬೆಟ್ಟ ಎದುರಾದರೇನು?
ನೋವುಗಳ ಮಳೆಯಾದರೇನು
ಅವಮಾನಗಳು ಹಣೆಯಲ್ಲಿ ಬರೆದಿದ್ದರೇನು?
ಅವುಗಳೆಲ್ಲಾ ಇಂದನಗಳು ಗುರಿಯ ದಾರಿಗೆ
ಗುರಿಯನ್ನು ತಲುಪುವ ಚಲವೊಂದಿದ್ದರೆ
ಸಾಗುತಿರು… ನೀ ಸಾಗುತಿರು…

ಪ್ರತಿ ಹಿನ್ನಡೆಯಲ್ಲೂ ಮುನ್ನಡಿಯಿದೆ
ಪ್ರತಿ ಮುನ್ನಡಿಯಲ್ಲೂ ಗೆಲುವಿನ ಮುನ್ನಡೆಯಿದೆ
ಸೂರ‍್ಯ ಚಂದ್ರರ ಆಯಸ್ಸು ನಿನಗಿಲ್ಲಾ
ನಿನ್ನ ಆಲಸ್ಯವೇ ನಿನ್ನ ಹಿನ್ನಡೆ
ನಿನ್ನ ಚಲವೇ ನಿನ್ನ ಮುನ್ನಡೆ
ಸಾಗುತಿರು… ನೀ ಮುಂದೆ…
ನೀನಗೇತಕೆ ಗೆಲುವು ಸೋಲಿನ ದಂದೆ?

( ಚಿತ್ರ ಸೆಲೆ: keep-moving-forward )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಶಿವಶಂಕರ ಕಡದಿನ್ನಿ says:

    ಹಡಪದ ಅವರ ಕವಿತೆ ಬಲು ಲಯಾವಾಗಿದೆ ಮತ್ತು ಗುರಿಯೇ ಒಂದು ಜೀವನ ಏಂದು ಹೇಳಬಹುದು
    ಶಿವಶಂಕರ ಕಡದಿನ್ನಿ

ಅನಿಸಿಕೆ ಬರೆಯಿರಿ: