ಸಹಿಸಿಕೋ ನೋವು

ಶಿವಶಂಕರ ಕಡದಿನ್ನಿ.

ಗುರು ಕಿವಿ ಹಿಡಿದು ಅಕ್ಶರ ತಿದ್ದಿಸಿದರೂ ಸಹಿಸಿಕೋ ನೋವು
ತಂದೆ ಕಿವಿ ಹಿಡಿದು ಬುದ್ದಿ ಕಲಿಸಿದರೂ ಸಹಿಸಿಕೋ ನೋವು

ಹಾಯಾಗಿ ಸುಕದ ನಿದ್ದೆಯಲಿ ಜಾರಿದಾಗ
ಗುಂಯ್ ಗುಡುವ ಸೊಳ್ಳೆ ಕಡಿದರೂ ಸಹಿಸಿಕೋ ನೋವು

ಪರಿ ತಪ್ಪಿ ಗುರಿಯ ಕಡೆ ನಡೆಯುವಾಗ,
ಏಳು ಬೀಳುವ ವೇಳೆಯಲಿ ಗಾಯವಾದರೂ ಸಹಿಸಿಕೋ ನೋವು

ವಿಶ್ವಾಸ ನಂಬಿ ಗೆಳೆಯರ ಜೊತೆಗೂಡಿದಾಗ,
ಗೆಳೆಯರೇ ಶತ್ರುಗಳಾಗಿ ದೂರಿದರೂ ಸಹಿಸಿಕೋ ನೋವು

ಪ್ರೇಮದ ಹೆಸರಲಿ ಸಂಗಾತಿಯೊಡನೆ ಬೆರೆತು
ಸಂಗಾತಿಯೇ ಮದು ಬಟ್ಟಲಲಿ ವಿಶವುಣಿಸಿದರೂ ಸಹಿಸಿಕೋ ನೋವು

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

6 ಅನಿಸಿಕೆಗಳು

 1. Surabhilatha says:

  Nicee

 2. Ratheesha rathnakara says:

  ಕವಿತೆ ಸೊಗಸಾಗಿದೆ

 3. ಅಮರೇಶ says:

  ಸೂಪರ್ ಸಾರ್
  ಅಮರೇಶ

ಅನಿಸಿಕೆ ಬರೆಯಿರಿ: