ಶೀರ್ ಕುರ್ಮಾ
– ಸವಿತಾ.
ಉತ್ತರ ಕರ್ನಾಟಕದ ಬಾಗದಲ್ಲಿ ಈದ್ ಹಬ್ಬದಲ್ಲಿ ಮಾಡುವ ವಿಶೇಶ ಸಿಹಿ ತಿನಿಸು ಇದು. ಇಲ್ಲಿ ಹಿಂದೂಗಳು ಕೂಡ ಮೊಹರಂ ನಲ್ಲಿ ಚೊಂಗೆ ಮತ್ತು ಈದ್ ಹಬ್ಬದಲ್ಲಿ ಶೀರ್ ಕುರ್ಮಾ ಮಾಡುವರು.
ಶೀರ್ ಕುರ್ಮಾ ಮಾಡಲು ಬೇಕಾಗುವ ಪದಾರ್ತಗಳು:
- ಕೆಳಗೆ ಪಟ್ಟಿ ಮಾಡಿರುವ ಒಣಹಣ್ಣುಗಳು
6 – ಬಾದಾಮಿ
6 – ಗೋಡಂಬಿ
6 – ಅಕ್ರೋಡ (walnut)
6 – ಗೇರುಬೀಜ
6 – ಪಿಸ್ತಾ
20 – ಒಣ ದ್ರಾಕ್ಶಿ
(ಇವುಗಳನ್ನು ಹಿಂದಿನ ದಿನ ರಾತ್ರಿ ನೀರಲ್ಲಿ ನೆನೆ ಹಾಕಿಟ್ಟರಬೇಕು) - 3 ಲೋಟ ಹಾಲು
- ಮುಕ್ಕಾಲು ಲೋಟ ಗೋದಿ ಹಿಟ್ಟಿನ ಶಾವಿಗೆ
- ಮುಕ್ಕಾಲು ಲೋಟ ಸಕ್ಕರೆ
- 2-3 ಸಣ್ಣ ಚಮಚ ತುಪ್ಪ
- 2 ಸಣ್ಣ ಚಮಚ ಗಸಗಸೆ
- ಸ್ವಲ್ಪ ಜಾಜಿಕಾಯಿ
- 4 ಏಲಕ್ಕಿ
- 4 ಕೇಸರಿ ದಳಗಳು
ಮಾಡುವ ಬಗೆ:
- ಏಲಕ್ಕಿ, ಜಾಜಿಕಾಯಿ ಪುಡಿ ಮಾಡಿ ಇಟ್ಟುಕೊಳ್ಳಿ
- ಗಸಗಸೆ, ಕೇಸರಿದಳಗಳನ್ನು ಬಿಟ್ಟು, ಉಳಿದ ಒಣಹಣ್ಣುಗಳನ್ನು ಹಿಂದಿನ ದಿನ ರಾತ್ರಿ ಸ್ವಲ್ಪ ನೀರಲ್ಲಿ ನೆನೆ ಹಾಕಿಡಿ
- ಮರುದಿನ ಒಣಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿರಿ
- ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಶಾವಿಗೆ ಹುರಿದು ತೆಗೆದಿಡಿ
- ನಂತರ ಇನ್ನೊಂದು ಚಮಚ ತುಪ್ಪ ಹಾಕಿ ಕತ್ತರಿಸಿದ ಒಣಹಣ್ಣುಗಳನ್ನು ಹುರಿದು ತೆಗೆದಿಡಿ
- ಒಂದು ಪಾತ್ರೆಯಲ್ಲಿ ಹಾಲು ಕಾಯಲು ಇಟ್ಟು ಕೇಸರಿ ದಳಗಳನ್ನು ಬೆರೆಸಿ, ಒಂದು ಕುದಿ ಬಂದ ನಂತರ ಹುರಿದ ಶಾವಿಗೆ ಸೇರಿಸಿ ಸ್ವಲ್ಪ ಕುದಿಸಿರಿ.
- ನಂತರ ಸಕ್ಕರೆ, ಕತ್ತರಿಸಿದ ಒಣಹಣ್ಣುಗಳ ಅರ್ದ ಬಾಗ ಕುದಿಯುವ ಶಾವಿಗೆಗೆ ಹಾಕಿರಿ. ಗಸಗಸೆ, ಏಲಕ್ಕಿ
- ಜಾಜಿ ಕಾಯಿ ಪುಡಿ ಹಾಕಿ ಕೈಯಾಡಿಸಿ
- ಒಲೆ ಆರಿಸಿರಿ, ಶೀರ್ ಕುರ್ಮಾ ಈಗ ತಯಾರು 🙂
ಶೀರ್ ಕುರ್ಮಾ ಕುಡಿಯಲು ಕೊಡುವಾಗ, ಕತ್ತರಿಸಿದ ಹುರಿದ ಒಣ ಹಣ್ಣುಗಳನ್ನು ಮೇಲೆ ಉದುರಿಸಿ ಕೊಡುವುದು.
( ಚಿತ್ರ ಸೆಲೆ: kn.wikipedia.org )
ಇತ್ತೀಚಿನ ಅನಿಸಿಕೆಗಳು