ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್.

( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು )

ಅಮ್ಮ ಅಮ್ಮ
ಹೂವಲಿ ರಸವಾ ಇಟ್ಟವರಾರಮ್ಮ?

ದುಂಬಿಯು ಬಂದು
ರಸವಾ ಹೀರಲು
ದೇವರ ವರವಮ್ಮ

ದುಂಬಿಗೆ ಅದುವೇ ಬದುಕಮ್ಮ!

ಅಮ್ಮ ಅಮ್ಮ
ಕಾಮನ ಬಿಲ್ಲು
ಬಾಗಿದೆ ಯಾಕಮ್ಮ?

ಬಣ್ಣದ ಬಾರವ
ತಾಳದೆ ಬಿಲ್ಲು ಬಾಗಿರಬಹುದಮ್ಮ
ಅದನು ನೋಡಲು
ಕುಶಿಯಮ್ಮ!

ಅಮ್ಮ ಅಮ್ಮ
ಆಗಸದಲ್ಲಿ
ಮೋಡವು ಯಾಕಮ್ಮ?

ಗಾಳಿಯು ಬೀಸಿ
ಮಳೆಯು ಸುರಿಯಲು‌ ಮೋಡವು ಬೇಕಮ್ಮ

ಬೆಳೆಗೆ ಮೋಡವೇ ಉಸಿರಮ್ಮ!

ಅಮ್ಮ ಅಮ್ಮ‌
ಹರಿಯುವ ನದಿಯು
ಯಾತಕೆ ಬೇಕಮ್ಮ?

ರೈತರ ಬೆಳೆಗೆ,
ದಣಿದ ದೇಹಕೆ
ನೀರು ಬೇಕಮ್ಮ

ನಮಗೆ ಅದುವೇ ಬಲವಮ್ಮ!

( ಚಿತ್ರ ಸೆಲೆ:  Baby_Trivia )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: