
Pandit Puttaraj Gawai who passed away in Gadag on Friday. KPN
ಗದುಗಿನ ನಾಡಲಿ ಜನಿಸಿದ ಗುರುವು…
– ಶಾಂತ್ ಸಂಪಿಗೆ.
ಗದುಗಿನ ನಾಡಲಿ ಜನಿಸಿದ ಗುರುವು
ನಾಡನು ಬೆಳಗಿದರು
ಅಂದಕಾರವ ಅಳಿಸಲು ಜಗದಿ
ಜ್ನಾನವ ನೀಡಿದರು
ತ್ರಿವಿದ ದಾಸೋಹ ಮೂರ‍್ತಿಯು ಇವರು
ಅಂದರಿಗೆ ಆಶ್ರಯ ನೀಡಿದರು
ಬೆಳಕು ಕಾಣದ ಮಕ್ಕಳಿಗೆ ಇವರು
ಸಂಗೀತ ಶಿಕ್ಶಣ ನೀಡಿದರು
ನೊಂದ ಜನರ ಕೂಗಿಗೆ ಕರಗಿದ
ಕರುಣಾಮಯಿ ಇವರು
ಅನಾತ ಮಕ್ಕಳ ಬಾಳನು ಬೆಳಗಿದ
ವಿಶ್ವಗುರು ಇವರು
ಪೂಜ್ಯ ಗುರುಗಳ ಸ್ಮರಿಸಿದರೆ
ಮನವ ತುಂಬಿ ಹರಸುವರು
ಕರುಣೆ ತುಂಬಲಿ ಎಲ್ಲರ ಮನದಲಿ
ಎಂದು ಲೋಕವ ಹರಸಿದರು
(ಚಿತ್ರ ಸೆಲೆ: daijiworld.com )