ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ.

ಹಸಿರಿನ ವನಸಿರಿ ಚಿಗುರೈತೆ
ಸುಗ್ಗಿಯು ಅಂಗಳ ತುಂಬೈತೆ
ಮಾಗಿಯ ಚಳಿಯು ಮುಗಿದೈತೆ
ಊರಿಗೆ ಸಂಕ್ರಾಂತಿ ಬಂದೈತೆ

ಗಾಳಿ ಪಟವ ಹಾರಿಸಿ ನಾವು
ಬಾನಿನ ಎತ್ತರ ಜಿಗಿದೇವು
ಮನೆ ಮುಂಬಾಗ ರಂಗೋಲಿ ಬಿಡಿಸಿ
ಸೀರೆಯ ಉಟ್ಟು ನಲಿದೇವು

ಜೋಡಿ ಎತ್ತನು ಮೇಯಿಸಿ ಹೊಲದಿ
ಕಿಚ್ಚನು ಹಾಯಿಸಿ ಕುಣಿದೇವು
ಎಳ್ಳು ಬೆಲ್ಲವ ನೀಡುತ ಊರಲಿ
ಒಳ್ಳೆಯ ಮಾತಾಡಿ ಎಂದೇವು

ಸೂರ‍್ಯ ದೇವನಿಗೆ ನಮಿಸಿ ದಿನವು
ಅವನಂತೆ ನಾಡು ಬೆಳಗುವೆವು
ಮನೆಯ ಅಂಗಳದಿ ನಗುವ ತುಂಬಿ
ನಂದಾದೀಪವ ಹಚ್ಚುವೆವು

ಕೂಡಿ ಬಾಳಿದರೆ ಸ್ವರ‍್ಗವು ಇಲ್ಲೆ
ಸಂಕ್ರಾಂತಿ ಬರುವುದು ದಿನನಿತ್ಯ
ಎಲ್ಲರ ಅಂತರಂಗದಿ ಪ್ರೀತಿ ಇರಲು
ಸಡಗರ ಸಂಬ್ರಮ ಪ್ರತಿನಿತ್ಯ

(ಚಿತ್ರ ಸೆಲೆ: apk-cloud.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: