ಕೊಬ್ಬರಿ ಹೋಳಿಗೆ
– ಸವಿತಾ.
ಏನೇನು ಬೇಕು?
- ಹಸಿ ಕೊಬ್ಬರಿ ತುರಿ – 1 ಬಟ್ಟಲು
- ಬೆಲ್ಲದ ಪುಡಿ – 1/2 ಬಟ್ಟಲು
- ಗಸಗಸೆ – 1 ಚಮಚ
- ಲವಂಗ – 2
- ಜಾಯಿಕಾಯಿ ಪುಡಿ – 1/4 ಬಾಗ
- ಗೋದಿ ಹಿಟ್ಟು – 1/2 ಬಟ್ಟಲು
- ಮೈದಾ ಹಿಟ್ಟು – 1/2 ಬಟ್ಟಲು
- ಚಿರೋಟಿ ರವೆ – 1 ಚಮಚ
- (4)ಏಲಕ್ಕಿ ಪುಡಿ
- ಸಲ್ಪ ಉಪ್ಪು (ಬೇಕಾದಲ್ಲಿ)
ಮಾಡುವ ಬಗೆ:
- ಗೋದಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ಕಾದ ಎಣ್ಣೆ ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಅತವಾ ಎರಡು ಗಂಟೆ ಇಡಿ.
- ಹಸಿ ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಕಾಯಿಸಲು ಒಲೆಯ ಮೇಲಿಟ್ಟು, ಸ್ವಲ್ಪ ಹೊತ್ತು ಕೈಯಾಡಿಸಿ.
- ಬೆಲ್ಲ ಕರಗಿಸಿ, ಕೊಬ್ಬರಿ-ಬೆಲ್ಲದ ಮಿಶ್ರಣವನ್ನು ಸ್ವಲ್ಪ ಗಟ್ಟಿ ಮಾಡಿ ಇಟ್ಟುಕೊಳ್ಳಿ.
- ಕೊಬ್ಬರಿ-ಬೆಲ್ಲದ ಮಿಶ್ರಣವನ್ನು ಸ್ವಲ್ಪ ಹೊತ್ತು ಆರಲು ಬಿಡಿ.
- ಏಲಕ್ಕಿ, ಲವಂಗ, ಜಾಯಿಕಾಯಿ ಪುಡಿ ಮಾಡಿ ಹಾಕಿ.
- ಗಸಗಸೆ ಉದುರಿಸಿ ಇನ್ನೊಮ್ಮೆ ಚೆನ್ನಾಗಿ ಕಲಸಿ ಹೂರಣದ ಉಂಡೆ ತಯಾರಿಸಿ ಇಟ್ಟುಕೊಳ್ಳಿ.
- ನಂತರ ಕಣಕದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ಕಲಸಿ
- ನಿಂಬೆ ಹಣ್ಣು ಗಾತ್ರದಶ್ಟು ಹಿಟ್ಟನ್ನು ತೆಗೆದುಕೊಂಡು, ಅದನ್ನು ಸ್ವಲ್ಪ ಲಟ್ಟಿಸಿ ಕೊಬ್ಬರಿ ಹೂರಣ ತುಂಬಿ
- ಮಣೆ ಮೇಲೆ ಒಂದು ಪ್ಲಾಸ್ಟಿಕ್ ಹಾಳೆಯ ಇಟ್ಟು, ಎಣ್ಣೆ ಹಚ್ಚಿ ಲಟ್ಟಿಸಿರಿ.
- ಬಿಸಿ ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿ ಬೇಯಿಸಿರಿ.
ಈಗ ಬಿಸಿಯಾದ ಕೊಬ್ಬರಿ ಹೋಳಿಗೆ ತಿನ್ನಲು ಸಿದ್ದ. ತುಪ್ಪದ ಜೊತೆ ಕೊಬ್ಬರಿ ಹೋಳಿಗೆಯನ್ನು ಸವಿಯಿರಿ.
ಇತ್ತೀಚಿನ ಅನಿಸಿಕೆಗಳು