ಮೊಸರನ್ನ

– ಸವಿತಾ.

curd rice, ಮೊಸರನ್ನ

ಬೇಕಾಗುವ ಸಾಮಾನುಗಳು

  • ಅಕ್ಕಿ – 1 ಲೋಟ
  • ಮೊಸರು – 1 ಲೋಟ
  • ಹಾಲು – 1/2 ಲೋಟ
  • ಹಸಿ ಶುಂಟಿ – 1/4 ಇಂಚು
  • ಒಣ ಮೆಣಸಿನ ಕಾಯಿ – 2
  • ಕರಿ ಮೆಣಸಿನ ಕಾಳು – 4
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಕರಿಬೇವು – 6 ಎಲೆ
  • ದಾಳಿಂಬೆ ಹಣ್ಣು – 1/2
  • ಕೊತ್ತಂಬರಿ ಸೊಪ್ಪು – 4 ಕಡ್ಡಿ
  • ಗೋಡಂಬಿ – 6
  • ಒಣ ದ್ರಾಕ್ಶಿ – 6
  • ತುಪ್ಪ – 3 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಅಕ್ಕಿ ತೊಳೆದು ಮತ್ತು ಎರಡು ಲೋಟ ನೀರು ಹಾಕಿ ಅನ್ನ ಮಾಡಿ ಇಟ್ಟುಕೊಳ್ಳಿ. ಮೊಸರನ್ನ ಮಾಡಲು ಒಗ್ಗರಣೆ ಮಾಡಿಕೊಳ್ಳಬೇಕು. ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಹಸಿ ಶುಂಟಿ ಪೇಸ್ಟ್ ಮಾಡಿ ಅತವಾ ಸಣ್ಣಗೆ ಕತ್ತರಿಸಿ ಹಾಕಿ. ಒಣ ಮೆಣಸಿನ ಕಾಯಿ ಮುರಿದು ಹಾಕಿ, ಕರಿ ಮೆಣಸಿನ ಕಾಳು, ಗೋಡಂಬಿ, ಒಣ ದ್ರಾಕ್ಶಿ ಹಾಕಿ ಚೆನ್ನಾಗಿ ಹುರಿದು ಒಲೆ ಆರಿಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿದರೆ ಮೊಸರನ್ನದ ಒಗ್ಗರಣೆ ತಯಾರು.

ಅನ್ನ ಕೈಯಿಂದ ಮಿಜ್ಜಿ ಮಾಡಿ ಮೊಸರು, ಹಾಲು ಸೇರಿಸಿ ಚೆನ್ನಾಗಿ ಕಲಸಿ. ಒಗ್ಗರಣೆ ಸೇರಿಸಿ ಚೆನ್ನಾಗಿ ಕಲಸಿ .

ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಬಿಡಿಸಿ ಇಟ್ಟುಕೊಂಡ ದಾಳಿಂಬೆ ಬೀಜ ಸ್ವಲ್ಪ ಮೇಲೆ ಹಾಕಿ. ಹಸಿರು ಕಪ್ಪು ತಾಜಾ ದ್ರಾಕ್ಶಿ ಇದ್ದರೇ ಸೇರಿಸಿ. ಈಗ ಮೊಸರನ್ನ ಸವಿಯಲು ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: