ಚುಟುಕು ಕವಿತೆಗಳು

 ಪ್ರವೀಣ್ ದೇಶಪಾಂಡೆ.

short poems in Kannada, ಚುಟುಕು ಕವಿತೆಗಳು

ಕವಿತೆ ಹೇಳಿದೆ
ನಾಲ್ಕು ಜನಕೆ
ಕಿವಿದಾಟಿ ಒಳಗಿಳಿಯುವಂತೆ
ಅವರೆದ್ದು ಹೋದರು
ಹೊರಗೆ
‘ನಾನು’ ಉಳಿಯಿತು
ಕವಿತೆಯ ಕತೆ ಮುಗಿಯಿತು

***

ಅಕ್ಕರದೆಲೆಯ ಮೇಲೆ
ಲೇಕನಿಯೆ ಹರಿಗೋಲು
ಬಾವ ಹಾಯಿಯ
ಬಿಚ್ಚಿ ಕೂತು
‘ನಾನು’ ಹುಟ್ಟು ಹಾಕಿತು
ಕವಿತೆ ದಡ ಮುಟ್ಟಿಸಿತು

***

ಪ್ರೀತಿಯ ಕವಿತೆ
ಸುಳ್ಳು ‘ನಾನು’.
ದಿಟಕೆ ವದುವೇ?
ಮದುವೆ ಯಾವತ್ತು?
ಕೂಲಂಕುಶ
ಕೇಳುತಿದೆ ಜಗತ್ತು
ಹೆರಲಾರೆ, ಹೊರಲಾರೆ
ತಿರುಗುತ್ತಿದ್ದೇನೆ
ಕದ್ದ ಬಸಿರ ಹೊತ್ತು

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *