ಪುಂಡಿ ಸೊಪ್ಪಿನ (ಪುಂಡಿಪಲ್ಲೆ) ಚಟ್ನಿ

– ಮಾನಸ ಎ.ಪಿ.

Greens chutney ಪುಂಡಿಪಲ್ಲೆ

ಬೇಕಾಗುವ ಸಾಮಗ್ರಿಗಳು

ಪುಂಡಿಪಲ್ಲೆ (ಸೊಪ್ಪು) – 1 ಕಟ್ಟು
ಹಸಿ ಮೆಣಸಿನಕಾಯಿ- 1 ಹಿಡಿ
ಮೆಂತೆಕಾಳು – 1 ಟೇಬಲ್ ಚಮಚ
ಇಂಗು – 1 ಚಿಟಿಕೆ
ಬೆಲ್ಲ – ಸ್ವಲ್ಪ
ಜಿರಿಗೆ – 1 ಟೇಬಲ್ ಚಮಚ
ಬೆಳ್ಳುಳ್ಳಿ – 10 ಎಸಳು
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಪುಂಡಿಪಲ್ಲೆಯನ್ನು ಬಿಡಿಸಿಕೊಂಡು ನೀರಿನಿಂದ ಶುಚಿಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮೆಂತೆ, ಇಂಗು ಹಸಿಮೆಣಸು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಸೊಪ್ಪನ್ನು ಹುರಿದುಕೊಳ್ಳಿ. ಈಗ ಹುರಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ ಬೆಲ್ಲ, ಜೀರಿಗೆ, ಬೆಳ್ಳುಳ್ಳಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿದರ ಪುಂಡಿಪಲ್ಲೆ ಚಟ್ನಿ ಸವಿಯಲು ಸಿದ್ದ. ಚಪಾತಿ, ರೊಟ್ಟಿಯ ಜೊತೆಗೆ ಎಣ್ಣೆ ಇಲ್ಲವೇ ತುಪ್ಪ ಸೇರಿಸಿ ಈ ಚಟ್ನಿಯನ್ನು ಸವಿದರೆ ತುಂಬಾ ಚೆನ್ನಾಗಿರುತ್ತದೆ.

(ಚಿತ್ರ ಸೆಲೆ:  ಮಾನಸ ಎ.ಪಿ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: