ರುಚಿ ರುಚಿಯಾದ ಕರ‍್ಚಿಕಾಯಿ
– ಸವಿತಾ.
ಏನೇನು ಬೇಕು?
- 1/2 ಕೆಜಿ – ಮೈದಾ
- 250 ಗ್ರಾಂ – ಒಣಕೊಬ್ಬರಿ
- 125 ಗ್ರಾಂ – ಕರಿ ಬಿಳಿ ಎಳ್ಳು
- 50 ಗ್ರಾಂ – ಪುಟಾಣಿ
- 200 ಗ್ರಾಂ – ಬೆಲ್ಲ
- 4 ಏಲಕ್ಕಿ
- 4 ಚಮಚ – ಚಿರೋಟಿ ರವೆ
- 1 ಚಮಚ – ಗಸಗಸೆ
- ಕರ‍್ಚಿಕಾಯಿ ಕರಿಯಲು ಎಣ್ಣೆ
ಮಾಡುವ ಬಗೆ
- ಮೈದಾ ಹಿಟ್ಟು, ಚಿರೋಟಿ ರವೆ, ಕಾಯಿಸಿದ ಎಣ್ಣೆ ಹಾಕಿ, ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಅತವಾ ಎರಡು ಗಂಟೆ ನೆನೆಯಲು ಬಿಡಿ
- ಒಣಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ
- ಎಳ್ಳು, ಪುಟಾಣಿ ಸ್ವಲ್ಪ ಹುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ
- ಒಣಕೊಬ್ಬರಿ ತುರಿ ಮತ್ತು ಗಸಗಸೆ, ಬೆಲ್ಲದ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಕರ‍್ಚಿಕಾಯಿಗೆ ತುಂಬಲು ತಯಾರು ಮಾಡಿ ಇಟ್ಟುಕೊಂಡಿರಿ
- ನೆನೆಸಿಟ್ಟಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಸ್ವಲ್ಪ ಉದ್ದ ಎಲೆ ಲಟ್ಟಿಸಿ, ನಡುವೆ ಕೊಬ್ಬರಿ ಮಿಶ್ರಣ ಹಾಕಿರಿ
- ಲಟ್ಟಿಸಿದ ಎಲೆಯ ಅಂಚಿನ ಸುತ್ತ ಸ್ವಲ್ಪ ನೀರಿನಿಂದ ತೀಡಿ, ಎಲೆಯನ್ನು ಮಡಚಿ
- ಕರಿದಾಗ ಕೊಬ್ಬರಿ ಮಿಶ್ರಣದ ಪುಡಿ ಹೊರ ಬರದಂತೆ ಒತ್ತಿಕೊಂಡು, ಕಾದ ಎಣ್ಣೆಯಲ್ಲಿ ಒಂದೊಂದೇ ಕರ‍್ಚಿಕಾಯಿಯನ್ನು ಸ್ವಲ್ಪ ಹೊಂಬಣ್ಣ ಬರುವವರೆಗೂ ಕರಿಯಿರಿ
ಕರ‍್ಚಿಕಾಯಿಯನ್ನು ಎರಡು ವಾರ ಇಟ್ಟೂ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು