ಬಿಸಿ ಬಿಸಿ ಆಲೂಗಡ್ಡೆ ಬೋಂಡಾ
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 5
ಮೆಣಸಿನ ಪುಡಿ – 2 ಚಮಚ
ಇಂಗು – ಸ್ವಲ್ಪ
ಕಡ್ಲೆಹಿಟ್ಟು – 200 ಗ್ರಾಂ
ಅಕ್ಕಿಹಿಟ್ಟು – 5 ಚಮಚ
ಓಂಕಾಳು ಪುಡಿ – ಕಾಲುಚಮಚ
ಎಣ್ಣೆ
ಮಾಡುವ ಬಗೆ
ಮೊದಲು ಕಡ್ಲೆಹಿಟ್ಟಿಗೆ ಮೆಣಸಿನ ಪುಡಿ, ಇಂಗು, ಓಂಕಾಳು ಪುಡಿ, ಅಕ್ಕಿಹಿಟ್ಟು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ನೀರಿನೊಂದಿಗೆ ಕಲಸಿಕೊಳ್ಳಿ. ಆಮೇಲೆ ಆಲೂಗಡ್ಡೆ ಸಿಪ್ಪೆ ತೆಗೆದು ತೆಳ್ಳನೆಯ ಹೋಳುಗಳನ್ನಾಗಿ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ಬಳಿಕ, ಹೆಚ್ಚಿದ ಆಲೂಗಡ್ಡೆಯನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಜಾಲಿಸೌಟಿನಿಂದ ಎರಡೂ ಕಡೆ ತಿರುಗಿಸಿ ಬೇಯಿಸಿಕೊಳ್ಳಿ. ತಯಾರಿಸಿದ ಆಲೂಗಡ್ಡೆ ಬೋಂಡಾವನ್ನು ಕಾಯಿ ಚಟ್ನಿ ಅತವಾ ಟೊಮೇಟೊ ಸಾಸ್‌ನೊಂದಿಗೆ ಸವಿಯಲು ನೀಡಿ.
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು