ವಂದನೆ ವಂದನೆ…

– ಸುರಬಿ ಲತಾ.

ವಂದನೆ. ನನ್ನಿ, ಗೆಳೆಯ, Thank you, love,

ವಂದನೆ ವಂದನೆ
ಆ ಬಾನಿಗೆ ವಂದನೆ
ಸುಮ್ಮನೆ ನಾ ಅಪ್ಪಿದೆ
ಒಪ್ಪಿದೆ ಇನಿಯನೆ

ಸರಿದಿಹ ತಂಗಾಳಿಗೆ
ನಲಿದಿಹೆ ತೋಳಿನಲಿ
ಗೆಳೆಯನ ಸಂಗದಲಿ
ತಂಗಾಳಿಗೆ ವಂದನೆ

ಪ್ರೇಮಿಗಳ ಮನದಾಸೆಗಳ
ಅರಿತಿಹ ಕರುಣನಿಗೆ
ಮಳೆಗರೆದಿಹ ವರುಣನಿಗೆ
ವಂದನೆ ಅಬಿವಂದನೆ

ನಡುಗಿದೆ ಮೈ ಸಣ್ಣಗೆ
ಒಡಲಾಯಿತು ತಣ್ಣಗೆ
ಬಿಸಿಯುಸಿರಿನ ಅಪ್ಪುಗೆ
ಮನವಾಯಿತು ಬೆಚ್ಚಗೆ

ಸಾಗಲೀ ಹೀಗೆಯೆ
ನಮ್ಮಯ ಗೆಳೆತನವು
ನಲಿದಿಹ ನನ್ನ ಒಲಿದಿಹ
ಗೆಳೆಯಗೆ ವಂದನೆ

ತಬ್ಬಿರಲು ನಮ್ಮಿಬ್ಬರನು
ಒಲವಿನ ಅಬಿಸಾರ
ಮಿಂಚಿನ ಸಂಚಾರ
ಇನ್ನೆಲ್ಲಿಯ ಅಪಚಾರ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: