ಬಲು ವಿಚಿತ್ರ ಈ ಪ್ರೇಮ ಪತ್ರ

– ಸುರಬಿ ಲತಾ.

ಒಲವಿನ ಓಲೆ, ಪ್ರೇಮ ಪತ್ರ, love letter, funny. ಹಾಸ್ಯ

ಇನಿಯ ಬರೆದನೊಂದು ಪ್ರೇಮ ಪತ್ರ
ಅದು ನೋಡಲು ಮಾತ್ರ ಬಲು ವಿಚಿತ್ರ
ಬರೆದದ್ದು ಅರ‍್ತವಾಗದು
ಆದರೂ ಪ್ರೇಮ ವ್ಯರ‍್ತವಾಗದು

ತಪ್ಪುಗಳೇ ಅದರಲ್ಲಿ ಬಹಳ
ಅವ ಕನ್ನಡ ಬರೆವುದೇ ವಿರಳ
ಕರೆದೆ ಗೆಳತಿಯನ್ನು, “ಸರಳ…”
ಓದಿ, ಬಿಟ್ಟಳು 24 ದಂತ ಹವಳ

ಕೊಂಬು, ಒತ್ತಕ್ಶರಗಳು ಮಾಯ
ಬರೆದಿರುವುದ ಓದಲೇ ಬಯ
ಅರಿವುದೆಂತು ಅವನ ಬಾವನೆ
ಗೊಂದಲಗೊಂಡು ಕೂತೆ ಸುಮ್ಮನೆ

ಅರಿತನೇನೋ ನನ್ನ ಪೇಚಾಟ
ಕ್ಶಮೆ ಕೇಳಿ ಶುರುಮಾಡಿದ ದೊಂಬರಾಟ
“ಮೊದಲು ಕನ್ನಡ ಕಲಿತು ಬಾ” ಎಂದೆ
ಹೆಮ್ಮೆಯಲಿ “ಸರಿಯಾಗಿ ಹೇಳಿದೆ” ಎಂದರು ತಂದೆ

ಕನ್ನಡ ಕಲಿಯುವುದರಲಿ ವರ‍್ಶ ಕಳೆದ
ಹೊಸ ಮದುಮಗ ನನಗಾಗಿ ಇಳಿದ
ಓಡಿ ಬಂದ ನನ್ನಿನ್ನಿಯ, ಗಾಬರಿಗೊಂಡಿತ್ತು ನೋಟ
ಪಟ ಪಟ ಪ್ರೇಮ ಕವನ ನುಡಿದೇ ಬಿಟ್ಟ

ಸಂತಸದಲಿ ಅವನ ಓಡಿ ತಬ್ಬಿ ಬಿಟ್ಟೆ
ಹೊಸ ಮದು ಮಗನ ಮೂತಿ ಆಯಿತು ಸೊಟ್ಟೆ
ನಾವಿಬ್ಬರೂ ಈಗ ಕನ್ನಡ ಸಹಪಾಟಿಗಳು
ಎರಡು ಮಕ್ಕಳೇ ನಮ್ಮ ವಿದ್ಯಾರ‍್ತಿಗಳು

(ಚಿತ್ರ ಸೆಲೆ: pixabay.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: