ಹೊನಲುವಿಗೆ 5 ವರುಶ ತುಂಬಿದ ನಲಿವು

– ಹೊನಲು ತಂಡ.


235ಕ್ಕೂ ಹೆಚ್ಚು ಬರಹಗಾರರು, 2200 ಕ್ಕೂ ಹೆಚ್ಚು ಬರಹಗಳು, ಪೇಸ್ಬುಕ್ ಪುಟಕ್ಕೆ 28,000 ಕ್ಕೂ ಹೆಚ್ಚು ಮೆಚ್ಚುಗೆಗಳು, ಟ್ವಿಟ್ಟರ್ ನಲ್ಲಿ 3500 ಕ್ಕೂ ಹೆಚ್ಚು ಹಿಂಬಾಲಕರು – ಹೀಗೆ ಒಂದೊಂದೇ ಮೈಲುಗಲ್ಲನ್ನು ದಾಟುತ್ತಾ ಮುನ್ನಡೆಯುತ್ತಿರುವ ಹೊನಲು ಆನ್ಲೈನ್ ಮ್ಯಾಗಜೀನ್, 5 ವರುಶ ಪೂರೈಸಿ 6ನೇ ವರುಶಕ್ಕೆ ಕಾಲಿಟ್ಟಿದೆ.

ದಿನೇ ದಿನೇ ಹೆಚ್ಚು ಹೆಚ್ಚು ಮಂದಿ ಮೆಚ್ಚುಗೆ ಗಳಿಸುತ್ತಾ ಸಾಗುತ್ತಿರುವ ಹೊನಲುವಿಗೆ – ಅಕ್ಕರೆಯಿಂದ ಶ್ರದ್ದೆಯಿಂದ ಹತ್ತು ಹಲವಾರು ವಿಶಯಗಳ ಬಗ್ಗೆ ಬರಹ ಮಾಡುತ್ತಿರುವ ಬರಹಗಾರರರು, ಬರಹಗಳನ್ನು ಓದಿ, ಹಂಚಿಕೊಳ್ಳುತ್ತಾ ಬರಹಗಾರರನ್ನು ಹುರಿದುಂಬಿಸುತ್ತಿರುವ ಓದುಗರು ಬೆನ್ನೆಲುಬಾಗಿದ್ದಾರೆ. ನಮ್ಮ ರಾಜ್ಯವಲ್ಲದೇ ಈ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲೂ ಹೊನಲಿನ ಬರಹಗಾರರು ಮತ್ತು ಓದುಗರಿರುವುದು ಹೊನಲಿನ ಹೆಗ್ಗಳಿಕೆ ಮತ್ತು ನಮಗೆ ನಲಿವು ನೀಡಿರುವ ವಿಚಾರ. ಬರಹಗಾರರ ಮತ್ತು ಓದುಗರ ಬೆಂಬಲವಿಲ್ಲದೇ ಹೊನಲು ಹೀಗೆ ವರುಶಗಳನ್ನು ಸರಾಗವಾಗಿ ದಾಟುತ್ತಾ ಮುನ್ನಡೆಯಲಾಗುತ್ತಿರಲಿಲ್ಲ.

ಆದ್ದರಿಂದ ಹೊನಲು ಬರಹಗಾರರು ಮತ್ತು ಓದುಗರೆಲ್ಲಾ ಒಂದೆಡೆ ಸೇರಿ  ಹೊನಲು  5 ವರುಶ ಪೂರೈಸಿದ  ಈ ಸಂತಸವನ್ನು ಹಂಚಿಕೊಳ್ಳುವ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ, ಇದೇ ಮೇ 26 ರಂದು ಕಾರ‍್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಈ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ.

ದಿನ: ಮೇ 26 2018
ಜಾಗ: ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ, ಬನಶಂಕರಿ 2ನೇ ಹಂತ, ಬೆಂಗಳೂರು
ಹೊತ್ತು: ಬೆಳಿಗ್ಗೆ 10 ರಿಂದ 1

ನಿಮ್ಮ ಪಾಲ್ಗೊಳ್ಳುವಿಕೆಯನ್ನು ಈ ಕೊಂಡಿಯಲ್ಲಿ ನಿಕ್ಕಿ ಮಾಡಿ: https://www.facebook.com/events/209502676523766

ಹಾಗೆಯೇ, ಹೊನಲು 5 ವರುಶ ಪೂರೈಸಿದ್ದಕ್ಕಾಗಿ ಕತೆ-ಕವಿತೆ ಸ್ಪರ‍್ದೆಯನ್ನು ಹಮ್ಮಿಕೊಂಡಿದ್ದೆವು. ಬಹಳಶ್ಟು ಬರಹಗಾರರು ಈ ಸ್ಪರ‍್ದೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಬರಹಗಳನ್ನು ಕಳಿಸಿದ್ದರು. ಸ್ಪರ‍್ದೆಯಲ್ಲಿ ಆಯ್ಕೆಯಾದ ಕತೆ-ಕವಿತೆಗಳ ಬರಹಗಾರರಿಗೆ ಬಹುಮಾನವನ್ನು ಈ ಕಾರ‍್ಯಕ್ರಮದಲ್ಲಿ ನೀಡಲಾಗುವುದು.

 

ನಿಮ್ಮ ಪಾಲ್ಗೊಳ್ಳುವಿಕೆಯನ್ನು ಎದುರು ನೋಡುತ್ತಿರುವ 🙂
ಹೊನಲು ತಂಡ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.