ಜೋಳದ ದೋಸೆ

–  ಸವಿತಾ.

ಜೋಳದ ದೋಸೆ, Jolada Dose

ಏನೇನು ಬೇಕು?

  • 1 ಲೋಟ ಜೋಳದ ಹಿಟ್ಟು
  • 1/2 ಲೋಟ ಚಿರೋಟಿ ರವೆ
  • 2 ಚಮಚ ಮೈದಾ ಹಿಟ್ಟು
  • 1/2 ಚಮಚ ಜೀರಿಗೆ
  • 1 ಹಸಿ ಮೆಣಸಿನಕಾಯಿ
  • ಸ್ವಲ್ಪ ಉಪ್ಪು

ಮಾಡುವ ಬಗೆ

  • ಜೋಳದ ಹಿಟ್ಟು ಸಾಣಿಸಿ ಇಟ್ಟುಕೊಳ್ಳಿ.
  • ಜೋಳದ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ ಮತ್ತು ಎರಡೂ ಮುಕ್ಕಾಲು ಲೋಟ ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.
  • ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ ಕಲ್ಲಿನಲ್ಲಿ ಅರೆದು ಪೇಸ್ಟ್ ಮಾಡಿ ಹಿಟ್ಟಿಗೆ ಹಾಕಿ ಇನ್ನೊಮ್ಮೆ ಚೆನ್ನಾಗಿ ಕಲಸಿಕೊಳ್ಳಿ.
  • ತವೆ ಬಿಸಿ ಮಾಡಿ, ಎಣ್ಣೆ ಹಾಕಿ ದೋಸೆ ಹೊಯ್ದು ಎರಡೂ ಬದಿ ಬೇಯಿಸಿರಿ.

ಈಗ ಜೋಳದ ದೋಸೆ ಸವಿಯಲು ಸಿದ್ದ. ಚಟ್ನಿ/ಈರುಳ್ಳಿಪಲ್ಯ /ಆಲೂಗಡ್ಡೆ ಪಲ್ಯದ ಜೊತೆ ತಿನ್ನಲು ಕೊಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks