ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ.

ವೀರ ಸೈನಿಕರು, ಯೋದರು, ದೇಶಬಕ್ತಿಯ ಕವಿತೆ. soldiers, partiotism

ಬಾರತ ಮಾತೆಯ ಹೆಮ್ಮೆಯ ಮಕ್ಕಳೆ
ಕೇಳಿರಿ ಶೌರ‍್ಯದ ಕತೆಯನ್ನು
ಹಗಲಿರುಳೆನ್ನದೆ ದೇಶವ ಕಾಯುವ
ಯೋದರ ತ್ಯಾಗದ ಕತೆಯನ್ನು

ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ
ದೇಶ ಪ್ರೇಮವಿದೆ ಇವರಲ್ಲಿ
ಸಾವನು ಮೆಟ್ಟಿ ಯುದ್ದವ ಗೆಲ್ಲುವ
ಸಾಹಸ ಚಲವಿದೆ ಮನದಲ್ಲಿ

ದೇಶ ಬಕ್ತಿಯೆ ಇವರ ಶಕ್ತಿಯು
ತರುವರು ಬದುಕಿಗೆ ನೆಮ್ಮದಿಯ
ತುರ‍್ತು ವಿಪತ್ತಲಿ ಪ್ರಾಣ ರಕ್ಶಿಸಿ
ನೀಡುವರು ಹೊಸ ಬದುಕನ್ನು

ಕೆಚ್ಚೆದೆ ವೀರರ ಬಲಿದಾನಕ್ಕೆ
ಕಂಬನಿ ಮಿಡಿದಿದೆ ನಾಡೆಲ್ಲ
ನಿಮ್ಮ ಸೇವೆಯ ರುಣದಿ ನಾವೆಲ್ಲ
ಎಂದೆಂದಿಗೂ ಅಮರರು ನೀವೆಲ್ಲ

ದೇಶದಿ ಜನರು ಸ್ಮರಿಸುವರು
ನೆನೆದು ಯೋದರ ತ್ಯಾಗವನು
ಯೋದರೆ ನಮಗೆ ಸ್ಪೂರ‍್ತಿಯು
ಸುಬದ್ರ ಬದುಕೆ ಸಮ್ರುದ್ದಿಯು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: