ಸ್ನೇಹವೆಂದರೆ ಚಂದನದಂತೆ

– ವಿನು ರವಿ.

ಗೆಳೆತನ, ಸ್ನೇಹ, friendship, togetherness

ಸ್ನೇಹವೆಂದರೆ ನೋಯಿಸುವುದಲ್ಲ
ಸಮಯದಿ ಸಾಂತ್ವನಿಸುವುದು

ಸ್ನೇಹವೆಂದರೆ ಸೋಲಿಸುವುದಲ್ಲ
ಗೆಲ್ಲಿಸಿ ಸಂಬ್ರಮಿಸುವುದು

ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ
ಕಾರಣ ಬೇಡದೆ ಪ್ರೀತಿಸುವುದು

ಸ್ನೇಹವೆಂದರೆ ಕೈ ಬಿಡುವುದಲ್ಲ
ಕೈ ಹಿಡಿದು ನಡೆಸುವುದು

ಸ್ನೇಹವೆಂದರೆ ದೂರಾಗುವುದಲ್ಲ
ಸದಾ ಹ್ರುದಯದಿ ನೆಲೆಸಿರುವುದು

ಸ್ನೇಹವೆಂದರೆ ಕನಸು ಕಟ್ಟುವುದಲ್ಲ
ನನಸಿನ ದಾರಿಯ ತೋರುವುದು

ಸ್ನೇಹವೆಂದರೆ ಸುಕದ ಹಂಚಿಕೆಯಲ್ಲ
ಕಶ್ಟವ ಹಂಚಿಕೊಳುವುದು

ಸ್ನೇಹವೆಂದರೆ ವಾದ ವಿವಾದವಲ್ಲ
ಗೌರವಿಸಿ ಸಂತಸವೀಯುವುದು

ಸ್ನೇಹವೆಂದರೆ ಚಂದನದಂತೆ
ಎಶ್ಟು ತೀಡಿದರೂ ಗಂದದ
ಪರಿಮಳ ಹರಡುವುದು

(ಚಿತ್ರ ಸೆಲೆ: maxpixel.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications