ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ.

ಕನ್ನಡ, ಕರ‍್ನಾಟಕ, kannada,

ಏನಾದರೂ ಬಿಡಬಲ್ಲೆ
ಕನ್ನಡವ ಬಿಡಲೊಲ್ಲೆ
ಉಸಿರಿಲ್ಲದೆ ಒಡಲಿಲ್ಲ
ಕನ್ನಡವಿಲ್ಲದೆ ನಾನಿಲ್ಲ

ಒಡಲಿನಿಂದ ಉಸಿರು
ಹೋದರೂ ಸರಿ
ಕನ್ನಡದ ಹೆಸರು
ಉಳಿಸುವುದೇ ಸರಿ

ರಕ್ತದ ಕಣಕಣದಿ
ಕನ್ನಡ ತುಂಬಿದೆ
ಅನ್ಯ ಯೋಚನೆಗೆ
ದಾರಿ ಎಲ್ಲಿದೆ

ಕನ್ನಡ ಸರಸ್ವತಿಯೇ
ನಿನ್ನ ಸಾಕ್ಶಿಯಾಗಿ ಹೇಳುವೆ
ನನ್ನ ಸರ‍್ವಸ್ವವನ್ನೇ
ಕನ್ನಡಕ್ಕಾಗಿ ದಾರೆಯೆರೆವೆ

(ಚಿತ್ರ ಸೆಲೆ: ytimg.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Vinaya Kumar says:

    ಬಹಳ ಚೆನ್ನಾಗಿದೆ ?

  2. ರವಿಚಂದ್ರ ಹರ್ತಿಕೋಟೆ says:

    ಸೊಗಸಾಗಿದೆ… ಕನ್ನಡ ಬುವನೇಶ್ವರಿಗೆ ಜಯವಾಗಲಿ

ರವಿಚಂದ್ರ ಹರ್ತಿಕೋಟೆ ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *